ಮೂಡುಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಗೆ (Second PUC examination) ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು (Excellent science and commerce undergraduate college) ಶೇ.99.96 ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಖುಷಿ ವೈ ಬಾಗಲಕೋಟ್ (Khushi y Bagalkot) 596 ಅಂಕದೊಂದಿಗೆ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದಿದ್ದು, ಮತ್ತೊಮ್ಮೆ ಗುಣಮಟ್ಟದ ಶಿಕ್ಷಣವನ್ನು ಸಾಬೀತುಪಡಿಸಿದೆ ಎಂದು ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ (Yuvraj Jain) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ್ಯೋತಿಪ್ರಿಯಾ (591) ಹಾಗೂ ತರುಣ್ ಸಿಂಗ್ (591) ಏಳನೇ ರ‍್ಯಾಂಕ್ (Seventh rank), ಸಂಪದಾ ಹೆಬ್ಬಾರ್ (590) ಎ0ಟನೇ ರ‍್ಯಾಂಕ್, ಪ್ರಣವ್ ಜಿ.ಆರ್ (588) ಹಾಗೂ ಸ್ವೀಕೃತ್ ಪೂಜಾರಿ (588) ಹತ್ತನೇ ರ‍್ಯಾಂಕ್ ಪಡೆಯುವುದರ ಮೂಲಕ ಒಟ್ಟು ರಾಜ್ಯಕ್ಕೆ ಆರು ರ‍್ಯಾಂಕುಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ವಾಣಿಜ್ಯ ವಿಭಾಗವು ಶೇ.100 ಫಲಿತಾಂಶ ದಾಖಲಿಸಿದೆ.
ಇದನ್ನ ಓದಿ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಪ್ರಾಯೋಗಿಕ ತರಬೇತಿ ಕಾರ್ಯಾಗಾರ
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ (Science students) ಸಾತ್ವಿಕ್ ಪೈ (585), ರಸೆಲ್ (584), ರಜತ್ ಆರ್ (582). ಸಾಯಿ ಪ್ರಸಾದ್ ಬೆನಗಿ (581), ಸಪ್ತಮಿ ಶೆಟ್ಟಿ (581), ವೈಶಾಕ್ ಎ0 (579), ಸ್ವಜನ್ ಶೆಟ್ಟಿ (578), ಚಿನ್ಮಯಿ ಬೋರ್ಕರ್ (577), ದೀಕ್ಷಾ ಡಿಕೆ(577), ಮೋನಲ್ ಪ್ರಕಾಶ್ ಬಳ್ಳುಪೇಟೆ (576), ಸ್ಪೂರ್ತಿ ಪಗಾಡ್ (575), ಅಪೂರ್ವ ದೇಶಪಾ0ಡೆ (575), ಅಭಿನವ್ ಎಸ್ (575), ಸ್ನೇಹಾ ಹೆಚ್ ಎಸ್ (575), ವಿಶ್ವ ಎಸ್ ಜಿ (573), ಲಿಖಿತ್ ಬಿಜೆ (573), ರಕ್ಷಿತ್ ಡಿ ವಿ (572), ರಂಗಸ್ವಾಮಿ ಜಿ ಕೆ (571), ವೆ0ಕಟೇಶ ಕೆ ವೈ (571), ಟಿ ತನ್ಮಯಾ (571), ದೇವಶು ಎನ್ ಆರ್ (571), ಸುಜಿತ್ ಪೂಜಾರಿ (570) ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ (Commerce students) ಗೌತಮ್ ಎಸ್ (582), ಹರ್ಷಿಣಿ (580), ಕುಸುಮಿತಾ ಎ ವಿ ಎನ್ (580), ಸನ್ಮಾನ್ ಪಿ ಗೌಡ (580), ಸುಚೇತಾ ಎಸ್ (579), ರಾಘವ್ ಎ (576), ಈಥನ್ ಕ್ರಿಸ್ ಪಿರೇರ (575) ದೀಕ್ಷಿತಾ ಜೆ ರಾಜು(575), ಪ್ರತೀಕ್ಷಾ (573), ಮೋನಿಕಾ ಟಿ ಎ (572), ಚ0ದನ್ ಗೌಡ (572), ಪ್ರಭ0ಜನ್ ಜಿ ಭಟ್ (571), ದ್ರುವಿತ್ ಬಾಲೆ (570), ಗೌರವ್ ಪಟೇಲ್ (570) ಅತ್ಯುತ್ತಮ ಅಂಕಗಳನ್ನು ಗಳಿಸಿದ್ದಾರೆ.
ಪರೀಕ್ಷೆಗೆ ಹಾಜರಾದ 596 ವಿದ್ಯಾರ್ಥಿಗಳಲ್ಲಿ 385 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 205 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಸಂಸ್ಥೆಯ ಒಟ್ಟು ಫಲಿತಾಂಶ 99.96 (Total result 99.96) ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ (Principal Pradeep Kumar Shetty), ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.