ಮೂಡುಬಿದಿರೆ: ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ (Jain University)ಅಖಿಲ ಭಾರತ ವಿಶ್ವವಿದ್ಯಾಲಯಗಳ ಒಕ್ಕೂಟ ಹಮ್ಮಿಕೊಂಡಿದ್ದ 36ನೇ ಅಖಿಲ ಭಾರತ ಅಂತರ್ ವಿವಿ ಯುವಜನೋತ್ಸವದಲ್ಲಿ 36th (All India Inter University Youth Festival) ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದ ಆಳ್ವಾಸ್ ರಂಗ ಅಧ್ಯಯನ ತಂಡ (Alvas Ranga Study Group) ಪ್ರಸ್ತುತ ಪಡಿಸಿದ ಏಕಾಂಕ ನಾಟಕ (A one-act play) ದುರ್ಯೋಧ ದ್ವಿತೀಯ ಬಹುಮಾನ ಪಡೆಯಿತು.
13ನೇ ಬಾರಿ ಆಳ್ವಾಸ್ ರಂಗ ಅಧ್ಯಯನ ತಂಡವು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದಿದೆ. ಕುವೆಂಪು ಬರೆದ ಸ್ಮಶಾನ ಕುರುಕ್ಷೇತ್ರ (Cemetery Kurukshetra) ಹಾಗೂ ಭಾಸ ಕವಿಯ ಊರುಭಂಗ ಆಧರಿತ, ರಂಗ ನಿರ್ದೇಶಕ ಜೀವನ್ ರಾಂ ಮಾರ್ಗದರ್ಶನದಲ್ಲಿ, ಭುವನ್ ಮಣಿಪಾಲ ರಂಗರೂಪ (Bhuvan Manipal Rangarup) ಮತ್ತು ನಿರ್ದೇಶನದ ದುರ್ಯೋಧನ ಏಕಾಂಕ ನಾಟಕವನ್ನು ಪ್ರಸ್ತುತ ಪಡಿಸಿದ್ದರು.
ಇದನ್ನ ಓದಿ: ಆಳ್ವಾಸ್ ಪುನರ್ಜನ್ಮದ 3ನೇ ವರ್ಷದ ವಾರ್ಷಿಕೋತ್ಸವ; ಕುಟುಂಬ ಸಮ್ಮಿಲನ
ಉಜ್ವಲ್ ವಿನ್ಯಾಸ, ಶ್ರೀಪಾದ ತೀರ್ಥಹಳ್ಳಿ ಹಾಗೂ ಹರ್ಷಿತಾ ಶಿರೂರು (Sripada Theerthahalli and Harshita Shiruru) ಸಂಗೀತ ನೀಡಿದ್ದು, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಾದ ಗಗನ್ ಶೆಟ್ಟಿ, ರೋನಿತ್ ರಾಯ್, ಕಾರ್ತಿಕ್ ಕುಮಾರ್, ಜೋಸಿತ್ ಪಿ. ಶೆಟ್ಟಿ, ಶ್ರೀಕಂಠ ರಾವ್, ಮನೀಶ್, ರೇವಣ್ಣ ಪಿಂಟೊ, ಲಿಖಿತಾ ಎ.ಪಿ., ವನ್ಯಶ್ರೀ ಎಚ್.ಸಿ ಅಭಿನಯಿಸಿದ್ದರು.
ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.