ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (Rajiv Gandhi University of Health Sciences) ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ವಿಭಾಗದ ರ‍್ಯಾಂಕ್ ಪ್ರಕಟಗೊಂಡಿದ್ದು, ಆಳ್ವಾಸ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್ (Alva’s Naturopathy and Yogic Science) ಕಾಲೇಜಿನ ಸ್ನಾತಕೋತ್ತರದ 4 ಹಾಗೂ ಪದವಿಯ ಓರ್ವ ವಿದ್ಯಾರ್ಥಿನಿ ರ‍್ಯಾಂಕ್ ಪಡೆದಿದ್ದಾರೆ.
ಇದನ್ನ ಓದಿ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಪ್ರಾಯೋಗಿಕ ತರಬೇತಿ ಕಾರ್ಯಾಗಾರ
ಸ್ನಾತಕೋತ್ತರ ಎಂ.ಡಿ. ಕ್ಲಿನಿಕಲ್ ನ್ಯಾಚುರೋಪತಿಯಲ್ಲಿ (Postgraduate M.D. Clinical Naturopathy) ಡಾ.ರೋಶಿತಾ ಪಿ. ಪ್ರಥಮ, ಡಾ. ಅಭಿಜ್ಞಾ ತೃತೀಯ ಹಾಗೂ ಡಾ. ಅಸ್ನಾ ಅನ್ನಾ ಜೋಸ್ ಎಂಟನೇ ರ‍್ಯಾಂಕ್ ಪಡೆದಿದ್ದಾರೆ. ಎಂ.ಡಿ. ಕ್ಲಿನಿಕಲ್ ಯೋಗದಲ್ಲಿ ಡಾ.ದಿವ್ಯಶ್ರೀ ಎಂ.ಎನ್. ಆರನೇ ರ‍್ಯಾಂಕ್ ಪಡೆದಿದ್ದಾರೆ.
ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಪದವಿಯಲ್ಲಿ ಶ್ರುತಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಕಾಲೇಜಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ (Alwas Education Foundation) ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲೆ ಡಾ.ವನಿತಾ ಶೆಟ್ಟಿ ಅಭಿನಂದಿಸಿದ್ದಾರೆ.