ಮೂಡುಬಿದಿರೆ: ಸ್ವಾತಂತ್ರ‍್ಯದ 75ನೇ ವಾರ್ಷಿಕೋತ್ಸವ (75th Anniversary of Independence) ಸಂಭ್ರಮದ ಸವಿನೆನಪಿಗಾಗಿ ಜ.15ರಂದು ರಾಜ್ಯಾದ್ಯಂತ ನಡೆದ ಯೋಗಥಾನ್‌ನಲ್ಲಿ ಶಿಕ್ಷಣ ಸಂಸ್ಥೆಯೊಂದರಲ್ಲಿ (Institute of Education in Yogathon)ಅತಿ ಹೆಚ್ಚು ಮಂದಿ ಯೋಗಾಭ್ಯಾಸ ಮಾಡಿದ ದಾಖಲೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆ (Alvas Education Foundation)ಪಾತ್ರವಾಗಿದೆ.
ರಾಜ್ಯದಾದ್ಯಂತ ಜನವರಿ 15ರಂದು ನಡೆದ ಯೋಗಥಾನ್‌ನಲ್ಲಿ ಏಕಕಾಲದಲ್ಲಿ 4,05,255 ಮಂದಿ ಪಾಲ್ಗೊಳ್ಳುವ ಮೂಲಕ ವಿಶ್ವದಾಖಲೆ ನಿರ್ಮಾಣವಾಗಿತ್ತು. ಅಂದು ರಾಜ್ಯದಲ್ಲೇ ಶಿಕ್ಷಣ ಸಂಸ್ಥೆಯೊಂದರಲ್ಲಿ ಅತಿಹೆಚ್ಚು ಮಂದಿ (31,986) ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಯೋಗಾಭ್ಯಾಸ ಮಾಡಿದ್ದರು. ದ್ವಿತೀಯ ಸ್ಥಾನವನ್ನು ಮೈಸೂರಿನ ಜೆಎಸ್‌ಎಸ್ ಸಂಸ್ಥೆ (JSS Institute, Mysore)ಪಡೆದಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ(Narayana Gowda, Minister of Youth Empowerment and Sports)ಪ್ರಕಟಿಸಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರಿಗೆ(Dr. M. To Mohan Alva)ಪ್ರಶಂಸಾ ಪತ್ರ ನೀಡಿ ಅಭಿನಂದಿಸಿದ್ದಾರೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಅಂದು ಏಕಕಾಲದಲ್ಲಿ ಯೋಗಾಭ್ಯಾಸ ಮಾಡಲಾಗಿತ್ತು. ಅತಿಹೆಚ್ಚು ಮಂದಿ ಯೋಗಾಭ್ಯಾಸ ಮಾಡಿದ ಜಿಲ್ಲೆಗಳ ಪೈಕಿ ಬೆಳಗಾವಿ(Belagavi) (49,626), ಮೈಸೂರು(Mysore) (41,044) ಹಾಗೂ ವಿಜಯಪುರ(Vijayapura) (36,644) ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.