ಮೂಡುಬಿದಿರೆ: ಜೀವನದಲ್ಲಿ ವೈಜ್ಞಾನಿಕ, ವೈಚಾರಿಕ ಹಾಗೂ ತಾರ್ಕಿಕ ಚಿಂತನೆ ಇರಬೇಕು. ನಂಬಿಕೆ ಮತ್ತು ಮೌಢ್ಯದ ನಡುವಿನ ಸ್ಪಷ್ಟತೆ ಇರಬೇಕು ಎಂದ ಅವರು, ಯಾವುದೇ ವಿಷಯಗಳನ್ನು ವಿಚಾರ ಮಾಡಿ ಅರ್ಥೈಸಿಕೊಂಡು ಸ್ಪಂದಿಸಬೇಕು ಎಂದು ಆಳ್ವಾಸ್ ಪುನರ್ಜನ್ಮ ಸಂಸ್ಥೆಯ (Alvas Reincarnation Institute) ಆಪ್ತಸಮಾಲೋಚಕ ಲೋಹಿತ್ ಬಂಟ್ವಾಳ್ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ (Department of Post Graduate Journalism and Mass Communication) ಅಭಿವ್ಯಕ್ತಿ ವೇದಿಕೆ ಸೋಮವಾರ ಹಮ್ಮಿಕೊಂಡಿದ್ದ ಮಾದಕ ವ್ಯಸನ ಮತ್ತು ಮೊಬೈಲ್ ಗೀಳು ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದನ್ನ ಓದಿ: 47 ವಿದ್ಯಾರ್ಥಿಗಳಿಗೆ ರಾಜ್ಯದ ಟಾಪ್ 10 ಸ್ಥಾನ; ಪಿಯುಸಿ ಇತಿಹಾಸದಲ್ಲಿ ಆಳ್ವಾಸ್ ಸಾರ್ವತ್ರಿಕ ದಾಖಲೆ
ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ, ವೈಜ್ಞಾನಿಕ-ವೈಚಾರಿಕ ಚಿಂತನ- ಮಂಥನ ಸಮಾಜದಲ್ಲಿ ಇಂದು ಅವಶ್ಯವಾಗಿದೆ ಎಂದರು. ವಿದ್ಯಾರ್ಥಿ ಸಂಯೋಜಕಿ ದಿಶಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಪವಿತ್ರಾ ನಿರೂಪಿಸಿದರು.