http://Moodubidreಮೂಡುಬಿದಿರೆ: ಜಾತಿ ಜಾತಿ (Caste system) ಕಚ್ಚಾಟ ಸಲ್ಲದು. ಸಮಾನ ಮನಸ್ಕರು ಈ ಬಗ್ಗೆ ಚಿಂತಿಸಬೇಕಾಗಿದೆ. ಸತ್ಯನಾರಾಯಣ ಪೂಜೆ (Sathyanarayana Pooja)ಸಾಮೂಹಿಕವಾಗಿ ಜನರು ಒಗ್ಗಟ್ಟಾಗಲು ಒಂದು ಮಾಧ್ಯಮ(Mediator)ಎಂದು ನುಡಿದರು.
ಆಲಂಗಾರು (Alangaru) ಕಟ್ಟೆಯಲ್ಲಿ ನಡೆದ 48ನೇ ವರ್ಷದ ಸಾರ್ವಜನಿಕ ಸತ್ಯನಾರಾಯಣ ಪೂಜೆ ಮತ್ತು ನಾಲ್ಕನೇ ಉದ್ಯಾಪನೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮೂಡುಬಿದಿರೆ ಜೈನಮಠದ(Jain Mata) ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ (Swasti Shree ChaarKeerthi Bhattarakka Panditacharyavariya Swamiji)ಆಶೀರ್ವಚನ ನೀಡಿ, ಸತ್ಕಾರ್ಯಗಳಿಗೆ ದಾನ ಮಾಡುವುದರಿಂದ ಜೀವನ ಸಾರ್ಥಕವಾಗುತ್ತದೆ ಎಂದರು.
ಶಾಸಕ ಉಮಾನಾಥ ಕೋಟ್ಯಾನ್(Umanatha Kotian) ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಬಂಗೇರಬೆಟ್ಟು(Suresh Shetty Bangerabettu)ಅಧ್ಯಕ್ಷತೆವಹಿಸಿದರು.
ಸನ್ಮಾನ: ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ, ಆಡಳಿತೆದಾರ ಈಶ್ವರ ಭಟ್, ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಿದ ಅಲಂಗಾರು ಜತನ್ನ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ, ಸಂಚಾಲಕಿ ಆಡಲಿನ್ ಜೆನೆಟ್ ಜತನ್ನ, ಸಮಾಜಸೇವೆಗಾಗಿ ಜಯಶ್ರೀ ಅಮರನಾಥ ಶೆಟ್ಟಿ, ವಕೀಲ ಎಂ.ಎನ್. ಪಾಂಡಿ ಕಾರ್ಕಳ ಹಾಗೂ ಭೂದಾನಿ ಕೊರಗ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಭೂದಾನ: ಸಮಿತಿಯ ಗೌರವಾಧ್ಯಕ್ಷ ಕೊರಗ ಶೆಟ್ಟಿ(Koraga Shetty) ಅವರು ಸ್ವಂತ ಉದ್ದೇಶಕ್ಕಾಗಿ ಖರೀದಿಸಿದ ಜಾಗದಲ್ಲಿ 36 ಸೆಂಟ್ಸ್ ಜಾಗವನ್ನು ನಿವೇಶನಗಳಿಗಾಗಿ ಮತ್ತು 20 ಸೆಂಟ್ಸ್ ನಷ್ಟು ರಸ್ತೆಗಾಗಿ ಮೀಸಲಿರಿಸಿ ಸಮಿತಿಯ ಹೆಸರಿನಲ್ಲಿ ನೀಡಿದ್ದಾರೆ. ವಿವಿಧ ಸಂಘಟನೆಗಳ ಶಿಫಾರಸಿನ ಮೇರೆಗೆ ಹೆಗ್ಡೆ, ಕ್ರಿಶ್ಚಿಯನ್, ಬಿಲ್ಲವ, ದೇವಾಡಿಗ, ವಿಶ್ವಕರ್ಮ, ಬಂಟ, ಭಂಡಾರಿ, ಬ್ರಾಹ್ಮಣ. ಗೌಡ ಸಾರಸ್ವತ, ಪರಿಯಾಳ ಸಮಾಜ ಸೇರಿದಂತೆ 12 ಜಾತಿ ಮತದವರಿಗೆ ದಾನ ಮಾಡಲಾಯಿತು.
ಕಟೀಲು ಹರಿನಾರಾಯಣ ದಾಸ ಆಸ್ರಣ್ಣ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ., ಕೆಪಿಸಿಸಿ(KPCC) ಪ್ರಧಾನ ಕಾರ್ಯದರ್ಶಿ ಮಿಥುನ್ ರೈ (Mithun Rai), ದ.ಕ. ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ (Dakshina Kannada Milk Fedaration) ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, .ಪಿ.ಎಂ.ಸಿ. ಮಾಜಿ ಅಧ್ಯಕ್ಷ ಕೆ. ಕೃಷ್ಣರಾಜ ಹೆಗ್ಡೆ, ಶಶಿಕಲಾ ಶೆಟ್ಟಿ (Sashikala Shetty), ಪೂನಾದ ಸದಾನಂದ ಗ್ರೂಪ್‌ಆಫ್ ಹೋಟೆಲ್ಸ್ನ ಚೇರ್ಮನ್ ಸದಾನಂದ ಶೆಟ್ಟಿ, ಪುರಸಭೆ ಸದಸ್ಯೆ ಸೌಮ್ಯಶೆಟ್ಟಿ, ಮುನ್ನೇರು ಮನೆ ವಸಂತ ಶೆಟ್ಟಿ ಮುಂಬೈ, ಮೋಹನ ಶೆಟ್ಟಿ ಪಡುಮಾರ್ನಾಡು, ಅಶೋಕ ಶೆಟ್ಟಿ ಬೆಳುವಾಯಿ, ಸಮಿತಿ ಮಾಜಿ ಅಧ್ಯಕ್ಷ ಎಂ. ದಯಾನಂದ ಪೈ, ಉದ್ಯಮಿ ಕೆ. ಶ್ರೀಪತಿ ಭಟ್ ಮುಖ್ಯ ಅತಿಥಿಗಳಾಗಿದ್ದರು.
ನಿತೇಶ್ ಮಾರ್ನಾಡ್ (Nithesh Marnad)ಮತ್ತು ಪ್ರಶಾಂತ್ ಭಂಡಾರಿ (Prashanth Bhandari) ನಿರೂಪಿಸಿದರು.
ವಿಜಯಕುಮಾರ್ ಕೊಡಿಯಾಲ್‌ಬೈಲ್(Vijayakumar Kodiyalbail)ನಿರ್ದೇಶನದ ಶಿವದೂತೆ ಗುಳಿಗ(Shivadootha Guliga)ತುಳು ನಾಟಕ ಪ್ರದರ್ಶನಗೊಂಡಿತು.