ಮೂಡುಬಿದಿರೆ: ರಾಜ್ಯ ಪದವಿ ಪೂರ್ವ ಶಿಕ್ಷಣದ ಇತಿಹಾಸದಲ್ಲೇ ಆಳ್ವಾಸ್ ಪದವಿ ಪೂರ್ವ ಕಾಲೇಜು (Alvas Pre-Graduate College) ದಾಖಲೆ ಸೃಷ್ಟಿಸಿದ್ದು, ಕಾಲೇಜಿನ ದ್ವಿತೀಯ ಪಿಯುಸಿಯ ವಾಣಿಜ್ಯ ವಿಭಾಗದ ಅನನ್ಯಾ ಕೆ. ಎ. 600ಕ್ಕೆ 600 ಅಂಕ ಪಡೆದಿದ್ದಾಳೆ. ಪರೀಕ್ಷೆಗೆ ಹಾಜರಾದ 2658 ವಿದ್ಯಾರ್ಥಿಗಳಲ್ಲಿ 2651 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ವಿಜ್ಞಾನ ವಿಭಾಗದಲ್ಲಿ 11 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 35 ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಓರ್ವ ವಿದ್ಯಾರ್ಥಿನಿ ಸೇರಿದಂತೆ ಕಾಲೇಜಿನ ಒಟ್ಟು 47 ವಿದ್ಯಾರ್ಥಿಗಳು ರಾಜ್ಯದ ಟಾಪ್ 10ರ ಒಳಗೆ ಸ್ಥಾನಗಳನ್ನು ಪಡೆಯುವ ಮೂಲಕ ಆಳ್ವಾಸ್ ಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪಿಯುಸಿ ಇತಿಹಾಸದಲ್ಲಿ (ಕೋವಿಡೇತರ) ವಿದ್ಯಾರ್ಥಿಯೊಬ್ಬರು ಪೂರ್ಣಾಂಕ (100 Percentage)ಪಡೆದಿರುವುದು ಸಾರ್ವಕಾಲಿಕ ಹಾಗೂ ಶಾಶ್ವತ ದಾಖಲೆಯಾಗಿದೆ ಎಂದರು. ಆಳ್ವಾಸ್ ಪದವಿ ಪೂರ್ವ ಕಾಲೇಜು ಶೇ.99.74ಫಲಿತಾಂಶ ದಾಖಲಿಸಿದೆ. ವಾಣಿಜ್ಯ ವಿಭಾಗದಲ್ಲಿ ಅನನ್ಯಾ ಕೆ.ಎ. 600 ಅಂಕಗಳೊಂದಿಗೆ ಪ್ರಥಮ ಹಾಗೂ ದಿಶಾ ರಾವ್ 596 ಅಂಕಗಳೊಂದಿಗೆ 2ನೇ ರ‍್ಯಾಂಕ್, ವಿಜ್ಞಾನ ವಿಭಾಗದಲ್ಲಿ ಪ್ರಚಿತಾ ಎಂ. 594 ಅಂಕಗಳೊಂದಿಗೆ ರಾಜ್ಯದಲ್ಲಿ ತೃತೀಯ ಹಾಗೂ ಕಲಾ ವಿಭಾಗದಲ್ಲಿ ಚೈತನ್ಯಾ ಗಣಪತಿ ಹೆಗಡೆ 589 (Chaitanya Ganapati Hegade 589 in Arts Department) ಅಂಕಗಳೊಂದಿಗೆ ರಾಜ್ಯದಲ್ಲಿ ಐದನೇ ಸ್ಥಾನ ಅಲಂಕರಿಸಿದ್ದಾರೆ.
ಇದನ್ನ ಓದಿ: ಕೋಟೆಬಾಗಿಲು ಮಹಮ್ಮಾಯಿ ದೇವಸ್ಥಾನದ ಜಾತ್ರಾ ಮಹೋತ್ಸವ
ಓರ್ವ ವಿದ್ಯಾರ್ಥಿನಿ ಶೇ.100, 23 ವಿದ್ಯಾರ್ಥಿಗಳು ಶೇ.98.33% ಅಧಿಕ, 39 ವಿದ್ಯಾರ್ಥಿಗಳು ಶೇ.98ಕ್ಕೂ ಅಧಿಕ ಫಲಿತಾಂಶ ಪಡೆದಿದ್ದು, 338 ವಿದ್ಯಾರ್ಥಿಗಳು ಶೇ.95ಕ್ಕಿಂತಲೂ ಅಧಿಕ (More than 95 percent), 1181 ವಿದ್ಯಾರ್ಥಿಗಳು 90%ಕ್ಕಿಂತಲೂ ಅಧಿಕ, 1910 ವಿದ್ಯಾರ್ಥಿಗಳು ಶೇ.85 ಕ್ಕೂ ಅಧಿಕ ಅಂಕಗಳನ್ನು ಗಳಿಸಿದ್ದಾರೆ. ಇಂಗ್ಲೀಷ್ ವಿಷಯದಲ್ಲಿ ಓರ್ವ ವಿದ್ಯಾರ್ಥಿನಿ, ಕನ್ನಡ ವಿಷಯದಲ್ಲಿ 3, ಹಿಂದಿಯಲ್ಲಿ 1, ಸಂಸ್ಕೃತದಲ್ಲಿ 32, ಬೌತಶಾಸ್ತ್ರದಲ್ಲಿ 36 (36 in Physics), ರಸಾಯನ ಶಾಸ್ತ್ರದಲ್ಲಿ 33 (33 in Chemistry), ಗಣಿತದಲ್ಲಿ 98, ಜೀವಶಾಸ್ತ್ರದಲ್ಲಿ 76 (76 in Biology), ಗಣಕ ವಿಜ್ಞಾನದಲ್ಲಿ 75, ಸಂಖ್ಯಾಶಾಸ್ತçದಲ್ಲಿ 28, ಅರ್ಥಶಾಸ್ತ್ರದಲ್ಲಿ 72, ಬ್ಯುಸಿನೆಸ್ ಸ್ಟಡೀಸ್ ನಲ್ಲಿ 54 (54 in Business Studies), ಅಕೌಂಟೆನ್ಸಿ ಯಲ್ಲಿ 88 (88 in Accountancy), ಇತಿಹಾಸದಲ್ಲಿ 1, ಬೇಸಿಕ್ ಮ್ಯಾತ್ಸ್ ನಲ್ಲಿ 42, ಸಮಾಜಶಾಸ್ತ್ರದಲ್ಲಿ 3 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕಗಳನ್ನು ಗಳಿಸಿದ್ದಾರೆ.
ಪ್ರಾಂಶುಪಾಲ ಪ್ರೊ. ಎಂ. ಸದಾಕತ್ (Principal Prof. M. Sadaqat), ಕಾಮರ್ಸ್ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ (Dean of Arts Venugopala Shetty) ಉಪಸ್ಥಿತರಿದ್ದರು.