News Karnataka
ಕ್ಯಾಂಪಸ್

ಆಳ್ವಾಸ್ ಆನಂದಮಯ ಆರೋಗ್ಯಧಾಮ: ಚಿಣ್ಣರ ಆರೋಗ್ಯ ಬೇಸಿಗೆ ಶಿಬಿರಕ್ಕೆ ಚಾಲನೆ

Photo Credit : News Karnataka

ಮೂಡುಬಿದಿರೆ: ಮಕ್ಕಳ ವ್ಯಕ್ತಿತ್ವ ವಿಕಸನದ ಜೊತೆ ಮನೋವಿಕಸನ ಅವಶ್ಯವಾಗಿದೆ. ಇದರಿಂದ ಪಪೂರ್ಣ ವ್ಯಕ್ತಿತ್ವ ರೂಪಿಸಲು ಸಾಧ್ಯ ಎಂದು ಆಳ್ವಾಸ್ ಆರೋಗ್ಯ ಕೇಂದ್ರದ ಶಿಶುತಜ್ಞ ಡಾ. ವಸಂತ್ ಟಿ. ಹೇಳಿದರು.

ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜು (Alwas Naturopathy and Yoga Science College) ಆಳ್ವಾಸ್ ಆನಂದಮಯ ಆರೋಗ್ಯಧಾಮದಲ್ಲಿ (Alvas Anandmaya Arogyadham) ಹಮ್ಮಿಕೊಂಡ ಚಿಣ್ಣರ ಆರೋಗ್ಯ ಬೇಸಿಗೆ ಶಿಬಿರ ಉದ್ಘಾಟಿಸಿಮಾತನಾಡಿದರು.

ಪರಿಸರವು ಮಕ್ಕಳ ಮನಸ್ಸಿನ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ಪೋಷಕರು ಮಕ್ಕಳಿಗೆ ಒಳ್ಳೆಯ ಪರಿಸರ ಕಲ್ಪಿಸಬೇಕು. ಮಕ್ಕಳು ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳುವಂತೆ ಮಾಡಬೇಕು. ಇದು ಭವಿಷ್ಯದಲ್ಲಿ ಅವರು ಉತ್ತಮ ಆಯ್ಕೆ ಹಾಗೂ ಸರಿಯಾದ ಹಾದಿಯಲ್ಲಿ ನಡೆಯಲು ಸಹಕಾರಿ ಎಂದರು.

ಇದನ್ನ ಓದಿ: ರಾಷ್ಟ್ರೀಯತೆ-ಸಾಮಾಜಿಕ ಪ್ರಜ್ಞೆ: ಆಳ್ವಾಸ್‌ನಲ್ಲಿ ವಿಶೇಷ ಉಪನ್ಯಾಸ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ (Dr. M Mohan Alva is the Chairman of Alva’s Education Foundation) ಮಾತನಾಡಿ, ಮಗುವಿನ ಸಮಗ್ರ ಬೆಳವಣಿಗೆಗೆ ಪ್ರತಿ ಮಗುವೂ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅವಶ್ಯ. ಉತ್ಸಾಹಭರಿತ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಪೋಷಕರು, ಶಿಕ್ಷಕರು ಉತ್ತಮ ಹವ್ಯಾಸ, ಆಸಕ್ತಿ ಬೆಳೆಸಲು ಅನುವು ಮಾಡಿಕೊಡಬೇಕು ಎಂದರು. ಆಳ್ವಾಸ್ ಫಾರ್ಮಸಿ ನಿರ್ದೇಶಕಿ ಡಾ. ಗ್ರೀಷ್ಮಾ ವಿವೇಕ್ ಆಳ್ವ (Alwas Pharmacy Director Dr. Grishma Vivek Alva) ಉಪಸ್ಥಿತರಿದ್ದರು.

ಆಳ್ವಾಸ್ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ವನಿತಾ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಅನಂತ ಕೃಷ್ಣ ಸಿ.ವಿ ನಿರೂಪಿಸಿ, ವಂದಿಸಿದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *