ಮೂಡುಬಿದಿರೆ: ನವೆಂಬರ್ 2022ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ(CA intermediate examination) ಆಳ್ವಾಸ್ ಪದವಿ ಕಾಲೇಜಿನ 10 ಜನ ವಿದ್ಯಾರ್ಥಿಗಳು ಗ್ರೂಪ್ -01 ಮತ್ತು ಗ್ರೂಪ್-02(group one and group 2) ವಿಭಾಗದಲ್ಲಿ ಉತ್ತೀರ್ಣರಾಗಿ, 32.25% ಫಲಿತಾಂಶ(Percentage)ಪಡೆದಿದ್ದಾರೆ. ಕಾಲೇಜಿನ ಬಿ.ಕಾಂ. ಪ್ರೊಫೆಶನಲ್ ವಿದ್ಯಾರ್ಥಿಗಳಾದ(BCOM Professional Students) ಆರನ್ ರೇಗೋ(486), ಚೇತನಾ ಕೋಡಿಹಳ್ಳಿ(471), ತುಳಸಿ(446), ಲೋಹಿತ್ ಈಶ್ವರ್ ಮೊಗೇರ್ (440), ವಿನಿಶಾ ಎಸ್. ಎಂ.(432), ಸುಶ್ಮಾ ಹೆಚ್.ಪಿ, ಶ್ರೀವತ್ಸ ಎಂ., ಪ್ರೇರಣಾ ಎಸ್ ಹೆಬ್ಬಾರ್, ಶಿವರಾಜ್, ತನುಶಾ ಎಸ್. ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ಇಂಟರ್ ಮೀಡಿಯಟ್ ಗ್ರೂಪ್ -01 ವಿಭಾಗದಲ್ಲಿ ಶುಭಾ ಗಣಪತಿ, ರಿಹಾಲ್ ಅಯ್ಯಪ್ಪ, ಪುನೀತ್, ಕಿರಣ್, ಶಶಾಂಕ್, ಅನೂಪ್, ಹೃತೀಶ್, ಕಾರ್ತಿಕ್, ತರುಣ್, ಕ್ಷಮಿತಾ, ಸ್ವರೂಪ್, ಚೇತನ್, ಶ್ರೇಯಾ ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ಇಂಟರ್ ಮೀಡಿಯಟ್ ಗ್ರೂಪ್ -02 ವಿಭಾಗದಲ್ಲಿ ಸುದೀಪ್, ಮನೀಶ್, ಶ್ರೇಯಾ, ರವಿಶಂಕರ್, ಮಧುಸೂಧನ್, ತನ್ವಿ, ಶ್ರದ್ಧಾ, ಪ್ರಜ್ನೇಶ್, ತೇಜಸ್ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.
ಸಿಎ ಇಂಟರ್ ಮೀಡಿಯಟ್ ಪರೀಕ್ಷೆಯ ಎರಡು ವಿಭಾಗದಲ್ಲಿ ರಾಷ್ಟ್ರಮಟ್ಟದ ಫಲಿತಾಂಶ 12.72% ಆಗಿದ್ದು, ಆಳ್ವಾಸ್ ದೇಶಿಯ ಮಟ್ಟದಲ್ಲಿ 32.25% ಫಲಿತಾಂಶ ಪಡೆದಿರುವುದು ಶ್ಲಾಘನೀಯ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ತಿಳಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಹಾಗೂ ಸಿ.ಎ. ಸಂಯೋಜಕರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.