ಮೂಡುಬಿದಿರೆ: ಅತಿಯಾದ ಮಾತು ರೇಡಿಯೊ ಉದ್ಘೋಷಕನ ಅರ್ಹತೆಯಲ್ಲ. ಮಾತಿನಲ್ಲಿ ವಿಷಯ, ಭಾಷೆಯ ಮೇಲಿನ ಹಿಡಿತ, ಸ್ಪಂದನೆ ಹಾಗೂ ಪ್ರಸ್ತುತಿಯು ಉತ್ತಮ ಆರ್‌ಜೆಯ ಲಕ್ಷಣ. ರೇಡಿಯೊ ಜನಪ್ರಿಯತೆ ಅಳೆಯುವ ರ‍್ಯಾಮ್, ಕಾರ್ ಟ್ರಾöಕ್ ಮತ್ತಿತರ ಮಾನದಂಡ ಎಂದು ರೇಡಿಯೊ ಮಿರ್ಚಿ ಆರ್‌ಜೆ ವಿವೇಕ್ (RJ Vivek) ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ (Alwas Education Foundation) ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ (Department of Journalism and Mass Communication) ಅಭಿವ್ಯಕ್ತಿ ವೇದಿಕೆಯು ಸೋಮವಾರ ಆಯೋಜಿಸದ `ರೇಡಿಯೊ ಅಂದು, ಇಂದು ಮತ್ತು ಮುಂದು’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದನ್ನ ಓದಿ: ಆಳ್ವಾಸ್ ಪುನರ್ಜನ್ಮದ 3ನೇ ವರ್ಷದ ವಾರ್ಷಿಕೋತ್ಸವ; ಕುಟುಂಬ ಸಮ್ಮಿಲನ
ವಿಭಾಗದ ಸಂಯೋಜಕ ಪ್ರಸಾದ ಶೆಟ್ಟಿ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು (Journalism students) ಮುದ್ರಣ, ವಿದ್ಯುನ್ಮಾನ ಮಾಧ್ಯಮದ ಜೊತೆ ರೇಡಿಯೊಗಳಿಗೂ ಸೇರುವಂತಾಗಬೇಕು ಎಂದರು. ವಿಭಾಗದ ಸಹ ಪ್ರಾಧ್ಯಾಪಕ ಡಾಶ್ರೀನಿವಾಸ ಹೊಡೆಯಾಲ, ಅಭಿವ್ಯಕ್ತಿ ವೇದಿಕೆ (Expression platform) ಸಹ ಸಂಯೋಜಕ ವೈಶಾಖ್ ಮಿಜಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪವಿತ್ರಾ ಕುಂದಾಪುರ ನಿರೂಪಿಸಿ, ಉಮರ್ ಫಾರುಕ್ ವಂದಿಸಿದರು.