ಮೂಡುಬಿದಿರೆ: ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯ (Gulbarga University)ಹಾಗೂ ನವದೆಹಲಿ ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿ (Newdelhi Association of Indian University) ಆಶ್ರಯದಲ್ಲಿ ನಡೆದ 36ನೇ ಅಂತರ ವಿಶ್ವವಿದ್ಯಾಲಯ ಸೌತ್ ಈಸ್ಟ್ ಇಂಡಿಯಾ ವಲಯ ಯುವಜನ ಮೇಳದ ಏಕಾಂಕ ನಾಟಕ (Ekanka Play)ಪ್ರಥಮ ಹಾಗೂ ಜಾನಪದ ನೃತ್ಯದಲ್ಲಿ (Folk Dance)ದ್ವಿತೀಯ ಸ್ಥಾನ ಪಡೆದ ಆಳ್ವಾಸ್ ಕಾಲೇಜು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ. ಆಳ್ವಾಸ್ ಕಾಲೇಜು ತಂಡವು ಮಂಗಳೂರು ವಿಶ್ವವಿದ್ಯಾಲಯವನ್ನು(Mangalore University) ಪ್ರತಿನಿಧಿಸಿದೆ.
ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನರಾಮ್ ಸುಳ್ಯ ಮಾರ್ಗದರ್ಶನದಲ್ಲಿ ಭುವನ್ ಮಣಿಪಾಲ್ ನಿರ್ದೇಶಿಸಿದ ಹಾಗೂ ಉಜ್ವಲ್ ಯುವಿ ವಿನ್ಯಾಸ ಮಾಡಿದ ದುರ್ಯೋಧನ ನಾಟಕ ಪ್ರಥಮ ಬಹುಮಾನ ಪಡೆದಿದೆ.
ಸುರೇಶ್ ಕುಮಾರ್ ನಿರ್ದೇಶನದ ಜಾನಪದ ನೃತ್ಯವು ದ್ವಿತೀಯ ಸ್ಥಾನ ಪಡೆಯಿತು. ಸಾಂಸ್ಕೃತಿಕ ಪ್ರತಿಭೆಗಳಿಗೆ ದತ್ತು ಯೋಜನೆ ಅಡಿಯಲ್ಲಿ ಉಚಿತ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನಳ್ವ ವಿಜೇತರನ್ನು ಅಭಿನಂದಿಸಿದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರವು 11 ಬಾರಿ ರಾಷ್ಟ್ರೀಯ ರಂಗಪುರಸ್ಕಾರಕ್ಕೆ (For the National Theater Award)ಪಾತ್ರವಾಗಿದೆ.https://moodabidri.newskannada.com/campus/naac-for-shri-mahaveer-first-grade-college