ಮೂಡುಬಿದಿರೆ: ಖಗೋಳ ಶಾಸ್ತ್ರ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಾಗುತ್ತಿದ್ದು, ಜನಜೀವನಕ್ಕೆ ಸಾಕಷ್ಟು ಉಪಯೋಗವಿದೆ. ವಿಜ್ಞಾನದ ಪ್ರಮೇಯಗಳೂ ದೈನಂದಿನ ಬದುಕಿಗೆ ಸಂಬಂಧಿಸಿವೆ . ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಣಿಪಾಲ ನೈಸರ್ಗಿಕ ವಿಜ್ಞಾನ ಕೇಂದ್ರದ ನಿರ್ದೇಶಕDirector, (Manipal Natural Science Centre), ಖಗೋಳ ಶಾಸ್ತ್ರಜ್ಞ ಡಾ.ಶ್ರೀಕುಮಾರ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸೋಮವಾರ ವಿಜ್ಞಾನ ವಿಭಾಗ ಆಯೋಜಿಸಿದ ಅಂತರಕಾಲೇಜು ಉತ್ಸವ ಉದ್ಭವ 2023 ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನ ಓದಿ: ಕೋಟೆಬಾಗಿಲು ದೇವಸ್ಥಾನದಲ್ಲಿ ಮುಷ್ಠಿ ಕಾಣಿಕೆ ಸಮರ್ಪಣೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ (Alwas Education Foundation) ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳ ಓದು ಕೇವಲ ಪಠ್ಯಕ್ಕೆ ಸೀಮಿತವಾಗಬಾರದು. ಸಾಮಾನ್ಯ ಜ್ಞಾನ ಸಂಪಾದಿಸಲೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹೊಸ ಪ್ರಯತ್ನದಲ್ಲಿ ಸೋಲು ಕಂಡರೆ, ಹೆದರದೇ ಮತ್ತೆ ಪ್ರಯತ್ನ ಮಾಡಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆತ್ಮ ರಿಸರ್ಚ್ ಸೆಂಟರ್‌ನ (Atma Research Centre) ಪ್ರಧಾನ ವೈಜ್ಞಾನಿಕ ಅಧಿಕಾರಿ ಡಾ.ರ‍್ಹಾನ ಝಮೀರ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸಂಯೋಜಕಿ ಶಿಖಾ ಎಎಸ್ ಮತ್ತು ಪ್ರಿಯಾ, ವಿಜ್ಞಾನ ವಿಭಾಗದ ಡೀನ್ ರಮ್ಯಾ ರೈ ಪಿ.ಡಿ (Dean of Science Ramya Rai P.D) ಹಾಗೂ ವಿದ್ಯಾರ್ಥಿ ಸಂಯೋಜಕ ಅಶ್ವಥ್, ಅಭಿಷೇಕ್, ಪ್ರಗತಿ ವಿದ್ಯಾರ್ಥಿನಿ ಮೇಘಶ್ರೀ ಕುಂದರ್, ಸುಶ್ಮಿತಾ ಜೈನ್ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಂದ 170 ವಿದ್ಯಾರ್ಥಿಗಳು ಆಗಮಿಸಿದ್ದರು. ಅಂತರಕಾಲೇಜು ಉತ್ಸವ ಉದ್ಭವ 2023 ಪ್ರಥಮ ಸ್ಥಾನವನ್ನು ಮಂಗಳೂರಿನ ಕೆನರಾ ಕಾಲೇಜು ಪಡೆದರೆ, ಉಜಿರೆಯ ಎಸ್‌ಡಿಎಂ ಕಾಲೇಜು (SDM College, Ujire) ದ್ವಿತೀಯ ಸ್ಥಾನ ಪಡೆಯಿತು.