ಮೂಡುಬಿದಿರೆ: ನಿರ್ದಿಷ್ಟ ವಿಷಯದಲ್ಲಿ ಆಳವಾದ ಜ್ಞಾನ, ಇತರ ಸಂಬಂಧಿತ ವಿಷಯಗಳಲ್ಲಿ ವಿಶಾಲವಾದ ಜ್ಞಾನ, ಜೀವಿತಾವಧಿಯ ಕಲಿಕೆ ಮತ್ತು ಅರಿವಿನ ಕೌಶಲ್ಯಗಳು ಯಶಸ್ಸನ್ನು ಸಾಧಿಸಲು ಪ್ರಮುಖ ಮಾರ್ಗಗಳಾಗಿವೆ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಡೆದ ಜ್ಞಾನವನ್ನು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಲು ಬಳಸಬೇಕು ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಐಒಎನ್ ವ್ಯಾಪಾರ ವಿಭಾಗದ ಮುಖ್ಯಸ್ಥ ದಿವಾಕರ್ ರೆಡ್ಡಿ ಹೇಳಿದರು.
ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಬೆಂಗಳೂರು (Tata Consultancy Services Bangalore) ಪ್ರಾದೇಶಿಕ ಮುಖ್ಯಸ್ಥ ಪ್ರತೀಕ್ ಗುಪ್ತಾ ಮುಖ್ಯ ಅತಿಥಿಯಾಗಿದ್ದರು. ಯೆನೆಪೊಯ ವಿಶ್ವವಿದ್ಯಾಲಯದ ಕುಲಪತಿ ಡಾ.ಯೆನೆಪೊಯ ಅಬ್ದುಲ್ ಕುಂಞ ಅಧ್ಯಕ್ಷತೆ ವಹಿಸಿದರು.
ಪ್ರಾಂಶುಪಾಲ ಡಾ.ಆರ್.ಜಿ. ಡಿಸೋಜ (Principal Dr. R.G. D’souza) ವಾರ್ಷಿಕ ವರದಿ ವಾಚಿಸಿದರು. ಯೆನೆಪೊಯ ಗ್ರೂಪ್‌ನ ಕಾರ್ಯನಿರ್ವಹಣಾ ನಿರ್ದೇಶಕ ಯೆನೆಪೊಯ ಅಬ್ದುಲ್ಲಾ ಜಾವೀದ್, ಕ್ಯಾಂಪಸ್ ಆಡಳಿತಾಧಿಕಾರಿ ಮೊಹಮ್ಮದ್ ಶಾಹಿದ್ ಉಪಸ್ಥಿತರಿದ್ದರು.
ಇದನ್ನ ಓದಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಟಿಯು ರಾಂಕ್ ವಿಜೇತೆ, ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಶ್ರೀನಿಧಿ ಪೈ ಅವರನ್ನು ಸನ್ಮಾನಿಸಲಾಯಿತು. ಪ್ರೊ.ವಾಣಿ ಸ್ವಾಗತಿಸಿದರು. ಪ್ರೊ.ಕಾವ್ಯಾ ವಂದಿಸಿದರು. ಮಹಿನ್ ಆರಿಫ್ ಕಾರ್ಯಕ್ರಮ ನಿರೂಪಿಸಿದರು.