ಮೂಡುಬಿದಿರೆ: 2023 ನೇ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90 ಕ್ಕೂ ಹೆಚ್ಚಿನ ಅಂಕ ಗಳಿಸಿದ ರಾಜ್ಯ ಸರ್ಕಾರಿ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನ ಓದಿ: ಸಿಎಸ್‌ಇಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪ.ಪೂ ವಿದ್ಯಾರ್ಥಿಗಳ ಸಾಧನೆ
ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಲು ಅರ್ಹತೆಗಳು ವಿದ್ಯಾರ್ಥಿ, ವಿದ್ಯಾರ್ಥಿನಿಯರ ತಂದೆ ತಾಯಿ ರಾಜ್ಯ ಸರ್ಕಾರಿ ನೌಕರರಾಗಿರಬೇಕು (State government employees) ಹಾಗೂ ¸ಸರ್ಕಾರಿ ನೌಕರರ ಸಂಘದ ಸದಸ್ಯರಾಗಿರಬೇಕು. ಸಂಘದಿಂದ ನಿಗದಿಪಡಿಸಿರುವ ನಮೂನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಥವಾ ತಾಲೂಕು ಅಧ್ಯಕ್ಷರಿಂದ ದೃಢೀಕರಿಸಿ ಅರ್ಜಿ ಸಲ್ಲಿಸುವುದು ನಮೂನೆ ಹಾಗೂ ಅರ್ಹ ದಾಖಲೆಗಳಿಲ್ಲದಿದ್ದಲ್ಲಿ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಗಮ ಮಂಡಳಿ, ಪ್ರಾಧಿಕಾರ ವಿಶ್ವ ವಿದ್ಯನಿಲಯ, ಖಾಸಗಿ ಹಾಗೂ ಅನುದಾಣಿತ ವಿದ್ಯಾ ಸಂಸ್ಥೆಗಳಲ್ಲಿ ನೌಕರರಾಗಿದ್ದಲ್ಲಿ ಅಂತವರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆನ್ ಲೈನ್ ಮೂಲಕ : hಣಣಠಿs ://biಣ.Iಥಿ/ಞsgeಚಿಠಿಠಿ2023 ಸಂಪರ್ಕಿಸಬಹುದು ಎಂದು ಮೂಡುಬಿದಿರೆ ತಾಲೂಕು ಸರ್ಕಾರಿ ನೌಕರರ ಸಂಘದ (Taluk Government Employees Association) ಅಧ್ಯಕ್ಷರಾದ ಎಸ್ ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.