ಮೂಡುಬಿದಿರೆ: ಕಜಕಿಸ್ತಾನದ ಅಸ್ತಾನದಲ್ಲಿ(Astana, Kazakhstan) ಫೆ.10ರಿಂದ 12ವರೆಗೆ ನಡೆಯಲಿರುವ ಏಷ್ಯನ್ ಇಂಡೋರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (Asian Indoor Athletics Championship) ಭಾರತವನ್ನು ಪ್ರತಿನಿಧಿಸುವ 25 ಮಂದಿ ಅಥ್ಲೀಟ್‌ಗಳ ತಂಡಕ್ಕೆ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ, ಹೈಜಂಪರ್ ಅಭಿನಯ ಎಸ್. ಶೆಟ್ಟಿ ಆಯ್ಕೆಯಾಗಿದ್ದಾರೆ.
ಇದನ್ನ ಓದಿ: ಸಿಎ ಫೌಂಡೇಶನ್ ಪರೀಕ್ಷೆ; ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಧನೆ
ಕಾರ್ಕಳದ(Karkala) ಮೂಲದ ಅಭಿನಯ ಆಳ್ವಾಸ್ ಕಾಲೇಜಿನಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ(Alwas Education Foundation) ಕ್ರೀಡಾ ದತ್ತು ಯೋಜನೆ ಅಡಿಯಲ್ಲಿ 8ನೇ ತರಗತಿಯಿಂದ ಪದವಿವರೆಗೆ ಶಿಕ್ಷಣ ಪಡೆದಿದ್ದರು. ಪ್ರಸ್ತುತ ಮುಂಬೈಯಲ್ಲಿ ಪಶ್ಚಿಮ ವಲಯ ರೈಲ್ವೆ ಉದ್ಯೋಗಿಯಾಗಿದ್ದಾರೆ. ಏಕಲವ್ಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅಭಿನಯ ಅವರ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.