ಮೂಡುಬಿದಿರೆ: ಉತ್ತಮವಾಗಿ ಕಾರ‍್ಯನಿರ್ವಹಿಸುತ್ತಿರುವ ಮೂಡುಬಿದಿರೆ ತಾಲೂಕಿನ ಐದು ಸರ್ಕಾರಿ ಪ್ರಾಥಮಿಕ ಶಾಲೆಗಳ ಶಾಲಾಭಿವೃದ್ಧಿ ಸಮಿತಿಗಳಿಗೆ ರಾಜ್ಯ ಎಸ್‌ಡಿಎಂಸಿ ಸಮನ್ವಯ ವೇದಿಕೆ (State SDMC Coordination Forum) ದ.ಕ ಜಿಲ್ಲೆ ವತಿಯಿಂದ ಮಂಗಳವಾರ ಪುತ್ತೂರಿನಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದನ್ನ ಓದಿ: ಮೂಡುಬಿದಿರೆಯಲ್ಲಿ ಎಸ್ ಸಿ ಮತ್ತು ಎಸ್ ಟಿ ಸಭೆ
ನಡ್ಯೋಡಿ ಸರ್ಕಾರಿ ಪ್ರಾಥಮಿಕ ಶಾಲೆ ಮಾರ್ಪಾಡಿ (Nadyodi Govt Primary School Marpadi) , ಸರಕಾರಿ ಪ್ರಾಥಮಿಕ ಶಾಲೆ ಪಣಪಿಲ, ಮಾಂಟ್ರಾಡಿ, ಜ್ಯೋತಿ ನಗರ ಹಾಗೂ ಸರಕಾರಿ ಉರ್ದು ಪ್ರಾಥಮಿಕ ಶಾಲೆ ಬೆಳುವಾಯಿಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.