ಮೂಡುಬಿದಿರೆ: ಸಿಬಿಎಸ್‌ಸಿ 10ನೇ ತರಗತಿಯ ಪರೀಕ್ಷೆಯಲ್ಲಿ ಆಳ್ವಾಸ್ ಕೇಂದ್ರೀಯ ಶಾಲೆಯು ಸತತ ಮೂರನೇ ವರ್ಷವೂ ಶೇ.100 ಫಲಿತಾಂಶ ದಾಖಲಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ (Alwas Education Foundation) ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು.
173 ಬಾಲಕರು ಮತ್ತು 71 ಬಾಲಕಿಯರು ಸೇರಿದಂತೆ ಒಟ್ಟು 244 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು (244 students wrote the exam), ಎಲ್ಲರೂ ತೇರ್ಗಡೆಯಾಗಿದ್ದಾರೆ. 8 ವಿದ್ಯಾರ್ಥಿಗಳು ಶೇ 95ಕ್ಕಿಂತಲೂ ಅಧಿಕ ಅಂಕ (8 students scored more than 95%) ಪಡೆದಿದ್ದಾರೆ. ನಿರೀಕ್ಷಾ 480 (ಶೇ.96), ಪ್ರಜ್ವಲ್ ಕಾಖಂಡ್ಕಿ 479 (ಶೇ95.80), ಅಹ್ಮದ್ ಸಾಜಿಲ್ 478 (ಶೇ.95.60), ಧನುಶ್ ಸಂಜೀವ ಚಿತ್ರಾಕ್ಷಿ 478 (ಶೇ.95.60), ಆರೋಹಣ್ ಸಿದ್ಧಾರ್ಥ ಕುಮ್ತೇಕರ್ 477 (ಶೇ.95.40), ವಿಕಾಸ್ ಗುಂಡೂರಾವ್ ಶಿಂಗಡಿ 477 (ಶೇ.95.40), ಸಿಯಾ ಜೆ.ಕರ್ಕೇರ 475 (ಶೇ.95), ಸಾಕ್ಷಿ ಆರ್.ಪೈ 475 (ಶೇ.95) ಶೇ.95ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.
ಶೇ.90 ಹಾಗೂ ಅಧಿಕ ಅಂಕ 25 (90% and high marks 25), ಶೇ.80 ಹಾಗೂ ಅಧಿಕ 45, ಶೇ.70 ಹಾಗೂ ಅಧಿಕ 69, ಶೇ.60 ಹಾಗೂ ಅಧಿಕ 54, ಶೇ.50 ಹಾಗೂ ಅಧಿಕ 40 ವಿದ್ಯಾರ್ಥಿಗಳು ಪಡೆದಿದ್ದಾರೆ.
ಇದನ್ನ ಓದಿ: ಎಸ್‌ಎಸ್‌ಎಲ್‌ಸಿ: ಆಳ್ವಾಸ್ ಶಾಲೆಯ ಸಾಧನೆ ಆರು ವಿದ್ಯಾರ್ಥಿಗಳಿಗೆ 620ಕ್ಕೂ ಅಧಿಕ ಅಂಕ
ಪ್ರಾಂಶುಪಾಲ ಮೊಹಮ್ಮದ್ ಶಫಿ ಶೇಕ್ (Principal Mohammad Shafi Shaikh), ಸಹಾಯಕ ಆಡಳಿತ ಅಧಿಕಾರಿ ರಾಜೇಶ್ ಕುಮಾರ್ ಶೆಟ್ಟಿ, ಉಪ ಪ್ರಾಂಶುಪಾಲ ಶೈಲಜಾ ರಾವ್ ಸುದ್ದಿಗೋಷ್ಠಿಯಲ್ಲಿದ್ದರು.