ಮೂಡುಬಿದಿರೆ: ಜೈನ ಧರ್ಮದಲ್ಲಿ (Jainism) ಸಂಯಮಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ. ಬದುಕಿನಲ್ಲಿ ತಾಳ್ಮೆ ಬಹು ಮುಖ್ಯ. ಇಲ್ಲವಾದರೆ ವ್ಯಕ್ತಿಯ ಜೀವನ ಅಸ್ತವ್ಯಸ್ತವಾಗುತ್ತದೆ. ಬದಲಾಗುತ್ತಿರುವ ಸಮಾಜದಲ್ಲಿ ಸರಳತೆಯನ್ನು ದೌರ್ಬಲ್ಯವೆಂದು ವ್ಯಾಖ್ಯಾನಿಸಲಾಗುತ್ತಿದೆ ಇದು ಸಲ್ಲದು. ಮನಸ್ ಶುದ್ಧಿ ಅಗತ್ಯ. ಬದುಕಿನ ತತ್ವ ತಿಳಿದುಕೊಳ್ಳುವುದೇ ನಿಜವಾದ ಆಧ್ಯಾತ್ಮ. ಈ ಮುಖೇನ ಭಗವಂತನನ್ನು ಸಂಧಿಸಬಹುದಾಗಿದೆ ಎಂದು ಶ್ರಿ ಕ್ಷೇತ್ರ ಧರ್ಮಸ್ಥಳದ (Shri Kshetra Dharmasthala) ಹೇಮಾವತಿ ಹೆಗ್ಗಡೆ ಹೇಳಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ (Alvas Shiksha Pratistha) ವತಿಯಿಂದ ಕೃಷಿ ಸಿರಿ ವೇದಿಕೆಯಲ್ಲಿ ನಡೆದ ಭಗವಾನ್ ಮಹಾವೀರ ಜಯಂತಿ (Lord Mahavira Jayanti) ಆಚರಣೆಯಲ್ಲಿ ಸಂದೇಶ ನೀಡಿದರು.
ಇದನ್ನ ಓದಿ: ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳ ಸಂಪನ್ನ
ಮೂಡಬಿದಿರೆಯ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ (Swastishree Bhattarak Charukeerthi Panditacharya Swamiji) ಆಶೀರ್ವಚನ ನೀಡಿದರು. ಮನುಷ್ಯನಲ್ಲಿ ಆತ್ಮ ಚಿಂತನೆ ಇರಬೇಕು. ಒಳಿತನ್ನು ಸದಾ ಪ್ರಶಂಸಿಸುವ ಗುಣ ಆತ ರೂಢಿಸಿಕೊಳ್ಳಬೇಕು. ಇದರಿಂದಾಗಿ ಒತ್ತಡ ರಹಿತ ಬದುಕು ಸಾಗಿಸಲು ಸಾಧ್ಯ. ಪರರ ಹಿತ,ಸಹನೆ, ಸಹಾಯ ಪ್ರವೃತಿಯಿಂದ ಮನಸ್ಸು ನಿಷ್ಕಲ್ಮಶ ಹೊಂದುತ್ತದೆ. ಸದ್ಗುಣ ಚಂಚಲ ಮನಸ್ಸನ್ನು ಸ್ಥಿರತೆ ಕಡೆಗೆ ಕೊಂಡೊಯ್ಯುತ್ತವೆ ಅದುವೇ ಆಧ್ಯಾತ್ಮ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ (Dr. M Mohan Alva) ಅಧ್ಯಕ್ಷತೆವಹಿಸಿದರು. ಜಗತ್ತು ಅನುಸರಿಸಬೇಕಾದದ್ದು ಒಂದೇ ಧರ್ಮ ಅದು ಮಾನವ ಧರ್ಮ. ಜೀವನ ಸರಳ ಮಾಡಲು ದಾರ್ಶನಿಕರು ಅನೇಕ ಧರ್ಮ ಹುಟ್ಟುಹಾಕಿದರು. ಇಂದು ದೇಶದಲ್ಲಿ ಹಲವು ಭಾಷೆ, ಹಲವು ಧರ್ಮ, ಮತ, ಜಾತಿಗಳಿವೆ. ಪ್ರತಿ ಧರ್ಮಕ್ಕೂ ಗೌರವ ಕೊಡುತ್ತಾ ಸೌಹಾರ್ದತೆಯಿಂದ ಬಾಳಬೇಕು ಈ ಮುಖೇನ ಲೋಕಕ್ಕೆ ಶಾಂತಿಯ ಸಂದೇಶ ಸಾರಬೇಕು ಎಂದರು.
ದಿ.ಡಾ.ಬಿ ಯಶೋವರ್ಮರವರ ಸ್ಮರಣಾರ್ಥವಾಗಿ ನಿರ್ಮಿಸಿದ ಯಶೋಕಿರಣ ಕಟ್ಟಡವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಹೇಮಾವತಿ ವಿ ಹೆಗ್ಗಡೆ ಉದ್ಘಾಟಿಸಿದರು.ಪಾಶ್ವನಾಥ ಇಂದ್ರ ಪೂಜಾ ವಿಧಿವಿಧಾನವನ್ನು ನೆರೆವೇರಿಸಿದರು. ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಬಳಗದವರಿಂದ ಜಿನ ಗೀತೆ ಗಾಯನ- ಸಂಗೀತ ಮಾಧರ‍್ಯ ಜಿನಗಾನ ವಿಶಾರಧೆ ನಡೆಯಿತುಶಾಸ್ತೊçÃಕ್ತವಾಗಿ ಜರುಗಿದ ಭಗವಾನ್ ಶ್ರೀ ಮಹಾವೀರ ಜಯಂತೆ ಆಚರಣೆಯು ತೋರಣ ಮಹೂರ್ತದೊಂದಿಗೆ ಪ್ರಾರಂಭವಾಗಿ ಜಿನ ಮೂರ್ತಿಗೆ ಅಭಿಷೇಕ ಹಾಗೂ ಅಷ್ಟವಿಧಾರ್ಚನೆ ಪೂಜಾ ವಿಧಾನದ ನಂತರ ಸಹಭೋಜನದೊಂದಿಗೆ ಮುಕ್ತಾಯವಾಯಿತು.
ಡಾ.ಬಿ ಯಶೋವರ್ಮ ಅವರ ಪತ್ನಿ ಸೋನಿ ವರ್ಮಾ, ಚೌಟರ ಅರಮನೆಯ ಕುಲದೀಪ್ ಎಂ, ಭಾರತೀಯ ಜೈನ ಮಿಲನ ವಲಯ 8 ಅಧ್ಯಕ್ಷ ಯುವರಾಜ ಭಂಡಾರಿ, ಬಸದಿಗಳ ಮೊಕ್ತೇಸರರಾದ ಸುದೇಶ ಕುಮಾರ ಪಟ್ಟಣಶೆಟ್ಟಿ, ದಿನೇಶ ಕುಮಾರ ಆನಡ್ಕ, ಉದ್ಯಮಿ ಕೆ ಶ್ರೀಪತಿ ಭಟ್, ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್ ಉಪಸ್ಥಿತರಿದ್ದರು. ಅಂಡಾರು ಗುಣಪಾಲ ಹೆಗ್ಡೆ ಸ್ವಾಗತಿಸಿ, ವಕೀಲೆ ಶ್ವೇತಾ ಜೈನ್ ಕಾರ‍್ಯಕ್ರಮ ನಿರೂಪಿಸಿ, ವಂದಿಸಿದರು.
ಯಶೋವರ್ಮರ ಸ್ಮರಣಾರ್ಥವಾಗಿ (Commemoration of Yashovarma) ಡಾ.ಎಂ ಮೋಹನ್ ಆಳ್ವರು ಕಟ್ಟಡಕ್ಕೆ ಯಶೋಕಿರಣ ಎಂದು ಹೆಸರಿಟ್ಟಿದ್ದಾರೆ.ಇದಕ್ಕೆ ನಾನು ಕೃತಜ್ಞಳಾಗಿದ್ದೇನೆ. ಆಳ್ವರ ವ್ಯವಹಾರಿಕ ಜ್ಞಾನದ ಹೊರತಾಗಿ ಅವರ ವ್ಯಕ್ತಿತ್ವದಿಂದ ಜನಸಾಮಾನ್ಯರು ಕಲಿಯಬೇಕಾದದ್ದು ಸಾಕಷ್ಟು ಇವೆ. ಅವರ ಕಲಿಕೆ ಮತ್ತು ಕಲ್ಪನೆಯ ಸಮತೋಲನದಿಂದ ಇಂದು ಆಳ್ವಾಸ್ ಶಿಕ್ಷಣ ಸಂಸ್ಥೆ ಈ ಪರಿ ಬೆಳೆದು ನಿಂತಿದೆ.
-ಹೇಮಾವತಿ ವಿ ಹೆಗ್ಗಡೆ.