ಮೂಡುಬಿದಿರೆ: ಸಿಎಯಲ್ಲಿ ಯಶಸ್ಸು ಪಡೆಯಲು ಸುಸ್ಥಿರ, ಸ್ಫೂರ್ತಿದಾಯಕ ಹಾಗೂ ನಿರಂತರ ಅಧ್ಯಯನ ಮುಖ್ಯ. ಮಕ್ಕಳ ಪೋಷಣೆಯ ಜೊತೆಗೆ, ಅವರಿಗೆ ಮಾನಸಿಕ ಒತ್ತಡ ಆಗದಂತೆ ಪೋಷಕರು ಸ್ನೇಹಿತರಂತೆ ಸಹಕರಿಸಬೇಕು ಎಂದು ದೆಹಲಿಯ ಲೆಕ್ಕ ಪರಿಶೋಧಕ ರಾಜೀವ್ ಚೋಪ್ರಾ ಹೇಳಿದರು.
ಆಳ್ವಾಸ್ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗವು ಬುಧವಾರ ಹಮ್ಮಿಕೊಂಡ ಸಿಎ ಫೌಂಡೇಶನ್ (CA Foundation) ವಿದ್ಯಾರ್ಥಿಗಳಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದನ್ನ ಓದಿ: ಆಳ್ವಾಸ್ ಅಭಿವ್ಯಕ್ತಿ ವೇದಿಕೆಯಿಂದ ವಿಶೇಷ ಉಪನ್ಯಾಸ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ (Dr. M. Mohan Alva) ಮಾತನಾಡಿ, ಸಿ.ಎ ಫೌಂಡೇಶನ್ ಪರೀಕ್ಷೆಯ ಒಟ್ಟು ಫಲಿತಾಂಶವು ಶೇ 29.25 ಬಂದಿದ್ದರೆ, ನಮ್ಮ ಕಾಲೇಜು ಶೇ 75.78 ಫಲಿತಾಂಶ (75.78 percent result) ದಾಖಲಿಸಿದೆ. 238 ವಿದ್ಯಾರ್ಥಿಗಳು ಜೂನ್‌ನಲ್ಲಿ ಸಿಎ ಫೌಂಡೇಶನ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಇದೊಂದು ಅನನ್ಯ ಸಾಧನೆ. ಅವರಿಗೆ ಬೇಕಾದ ಅತ್ಯುನ್ನತ ತರಬೇತುದಾರರನ್ನು ಕರೆಯಿಸಿಕೊಳ್ಳಲು ಆಳ್ವಾಸ್ ಸಿದ್ಧವಾಗಿದೆ ಎಂದರು.
ಕಾಲೇಜಿನ 97 ವಿದ್ಯಾರ್ಥಿಗಳು ಈ ಬಾರಿ ಸಿಎ ಫೌಂಡೇಶನ್ ಪರೀಕ್ಷೆ ತೇರ್ಗಡೆಯಾಗಿದ್ದು, ಅವರನ್ನು ಅಭಿನಂದಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಎಂ.ಡಿ (Prashant MD Head of Commercial Department), ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ್ ಕೆ.ಜಿ ಹಾಗೂ ಸಿಎ ಫೌಂಡೇಶನ್ ಹಾಗೂ ಸಿಎ ಇಂಟರಮಿಡಿಯೇಟ್‌ನ ಸಂಯೋಜಕ ಅನಂತ ಶಯನ ಉಪಸ್ಥಿತರಿದ್ದರು. ಸಿಂಚನಾ ಶೆಟ್ಟಿ ನಿರೂಪಿಸಿದರು. ಅಪರ್ಣಾ ಕೆ. ಸ್ವಾಗತಿಸಿದರು. ಪ್ರತೀಕ್ಷಾ ವಂದಿಸಿದರು.