ಮೂಡುಬಿದಿರೆ: ಇಲ್ಲಿನ ಮೆಸ್ಕಾಂ (Mescom) ಬಳಿ ವೇಣೂರು-ಬಿಸಿರೋಡನ್ನು (Venur-Bsirodu) ಸಂಧಿಸುವ ರಾಜ್ಯ ಹೆದ್ದಾರಿಯಲ್ಲಿ ಪಿಡಿಬ್ಲುö್ಯಡಿ (PWD) ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ ಎಂದು ಆರೋಪಿಸಿ ಕಾಂಗ್ರೆಸ್ ಶುಕ್ರವಾರ ಪ್ರತಿಭಟನೆ ನಡೆಸಿ ಸರ್ಕಲ್ ತೆರವಿಗೆ ಆಗ್ರಹಿಸಿದೆ.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ (Former Minister Abhay Chandra Jain) ಶಾಸಕರ ನಿಧಿಯಿಂದ ರೂ 5 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ವೃತ್ತ ಅವೈಜ್ಞಾನಿಕ ರೀತಿಯಲ್ಲಿದೆ. ಈ ರಸ್ತೆಯಲ್ಲಿ ದಿನಕ್ಕೆ ನೂರಾರು ವಾಹನಗಳು ಓಡಾಡುತ್ತಿದ್ದು, ಬೃಹದಾಕಾರದ ವೃತ್ತದಿಂದಾಗಿ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಈಗಾಗಲೇ ಪ್ರತಿಭಟನೆ ನಡೆಸಿ ಪುರಸಭೆ, ಪಿಡುಬ್ಲö್ಯಡಿ ಎಂಜಿನಿಯರ್ ಮತ್ತು ಶಾಸಕರನ್ನು ಎಚ್ಚರಿಸಲಾಗಿದೆ. ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾಗ ಎರಡು ದಿನ ಸಮಯಾವಕಾಶ ಕೇಳಿದ್ದರು. ಆದರೆ ಏನೂ ಪ್ರಗತಿಯಾಗಿಲ್ಲ. ಶೇ.40 ಪರ್ಸಂಟೇಜ್ (40% percentage) ಕಮಿಷನ್‌ಗಾಗಿ ಶಾಸಕರ ಮೂಲಕ ಸರ್ಕಾರದ ಹಣ ದುರ್ಬಳಕೆಯಾಗುತ್ತಿದೆ. ತನ್ನ ಸಂಬಂಧಿಕರ ಹೆಸರಿನಲ್ಲಿ ಕಾಮಗಾರಿ ಗುತ್ತಿಗೆ ನಡೆಸುತ್ತಿರುವ ಶಾಸಕರಿಗೆ ಜನರ ಕಷ್ಟ ಅರ್ಥವಾಗುತ್ತಿಲ್ಲ ಎಂದು ಆರೋಪಿಸಿದರು.
ಅವೈಜ್ಞಾನಿಕ ಸರ್ಕಲ್ (Unscientific circle) ಅನ್ನು ಸರಿಪಡಿಸುವಂತೆ ಖುದ್ದು ನಾನೇ ದ.ಕ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ನೀಡಿದ್ದೆ. ಎರಡು ದಿನ ಸಮಯಾವಕಾಶ ಕೇಳಿದ್ದ ಜಿಲ್ಲಾಧಿಕಾರಿ ನಂತರ ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದಾರೆ. ಜನರಿಗಾಗುವ ತೊಂದರೆಯನ್ನು ನೋಡಿ ನಾವು ಸುಮ್ಮನಿರುವುದಿಲ್ಲ. ಶೀಘ್ರದಲ್ಲೆ ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ಮೂಡುಬಿದಿರೆ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಅಭಯಚಂದ್ರ ಎಚ್ಚರಿಸಿದರು.
ಇದನ್ನ ಓದಿ: ಮೂಡುಬಿದಿರೆ ಪುರಸಭೆ 31.07ಕೋಟಿ ಮಿಗತೆ ಬಜೆಟ್ ಮಂಡನೆ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ (Bloc Congress President Valerian Sequeira), ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ (Mahila Congress president Supriya D. Shetty) , ಪುರಸಭೆ ಸದಸ್ಯರಾದ ಕೊರಗಪ್ಪ, ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು, ರೂಪಾ ಎಸ್. ಶೆಟ್ಟಿ, ಪುರಂದರ ದೇವಾಡಿಗ, ಇಮಾಯುತ್ತಲ್ಲಾ, ಇಕ್ಬಾಲ್ ಕರೀಂ ಪಕ್ಷದ ಪ್ರಮುಖರಾದ ಜಯ ಕುಮಾರ್ ಶೆಟ್ಟಿ, ಚಂದ್ರಹಾಸ್ ಸನಿಲ್, ಅಲ್ವಿನ್ ಮಿನೇಜಸ್ ಮತ್ತಿತರರಿದ್ದರು.