ಮೂಡುಬಿದಿರೆ: ದಿ ಇನ್‌ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿಸ್ ಆಫ್ ಇಂಡಿಯಾ(The Institute of company secretaries of India) ನಡೆಸಿದ ಕಂಪೆನಿ ಸೆಕ್ರೆಟರಿ ಎಕ್ಸಿಕ್ಯೂಟಿವ್ ಪ್ರವೇಶ ಪರೀಕ್ಷೆ(ಸಿಎಸ್‌ಇಇಟಿ)(company secretary executive entrance exam)ಯಲ್ಲಿ ಆಳ್ವಾಸ್ ಪದವಿ ಕಾಲೇಜಿನ 27 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ 87.09 ಫಲಿತಾಂಶ ದಾಖಲಾಗಿದೆ.
ಕಾಲೇಜಿನ ಬಿ.ಕಾಂ ವಿದ್ಯಾರ್ಥಿಗಳಾದ ವರ್ಷ ಎನ್., ಅರ್ಪಿತಾ ಶೆಟ್ಟಿ, ದೀಕ್ಷಾ ಜೆ ಭಂಡಾರಿ, ದೀಕ್ಷಾ ಜೆ.ಶೆಟ್ಟಿ, ಮೆಲಿಷಾ ತಾವ್ರೂ, ರಿಷಿಕಾ ಆರ್. ಶೆಟ್ಟಿ, ಶರಣ್ಯ ಗಿರೀಶ್, ವಿನೋದ್ ಕುಮಾರ್, ಅಮೃತಾ ಎಚ್.ಆರ್, ಅಂಕಿತಾ ಕೃಷ್ಣಪ್ಪ ದೇವಾಡಿಗ, ಈಶ್ವರಿ, ಜಯಶ್ರೀ, ಮಧುಮಿತ ಜೆ, ನಿಹಾರಿಕ ಡಿ. ವಿ, ನಿಖಿತಾ ಎಸ್, ಪ್ರಥಮ್ ಜೋಗಿ ಎಚ್.ಎಂ, ಸಂಧ್ಯಾ, ಶ್ರೇಂiÀi ಜೈನ್ ಬಿ., ಸ್ಮಿತಾ ಕೆ. ರೈ, ಸುರಭಿ ಕೆ.ಎಸ್, ವಂದನಾ ಎಸ್.ಸಿ, ವಿನು ಟಿ. ಸಾಲ್ಯಾನ್, ಬೃಂದಾ ಡಿ. ಶೆಟ್ಟಿ, ಶರಣ್ ರೈ ಎಸ್, ಸ್ವಾತಿ ಶೆಟ್ಟಿ, ಮಂಥನ್ ರಜಶ್ ಜವನ್‌ಜಾನ್, ಅನುಷಾ ಶರುನ್ ಎಸ್. ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ.
ಸಿಎಸ್‌ಇಇಟಿ(CSEET) ಪರೀಕ್ಷೆಯಲ್ಲಿ ದೇಶದಲ್ಲೇ ಒಟ್ಟು ಶೇ 67.73 ಆಗಿದ್ದು ಆಳ್ವಾಸ್ ಕಾಲೇಜು ಶೇ 87.09 ಫಲಿತಾಂಶ ಪಡೆದಿರುವುದು ಶ್ಲಾಘನೀಯ ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ(Dr Mohan Alva) ಅಭಿನಂದಿಸಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ.ಜಿ. ಹಾಗೂ ಸಿಎಸ್‌ಇಇಟಿ ಸಂಯೋಜಕಿ ಲಾವಣ್ಯ ಮಾಹಿತಿ ನೀಡಿ, ಅಭಿನಂದಿಸಿದ್ದಾರೆ.