ಮೂಡುಬಿದಿರೆ: ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಇದರ ದ.ಕ. ಜಿಲ್ಲಾ ಸಮತಿಯ ವತಿಯಿಂದ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ದಲಿತ ಸಮಾವೇಶ (Dalit Samavesh) ನಡೆಯಿತು.
ಆದಿವಾಸಿ ಬುಡಕಟ್ಟು ಜನಾಂಗದ (Adivasi tribe) ರಾಜ್ಯ ಸಂಚಾಲಕ, ದಲಿತ ಹಕ್ಕುಗಳ (Dalit rights) ಮಾರ್ಗದರ್ಶಕ ಡಾ.ಕೃಷ್ಣಪ್ಪ ಕೊಂಚಾಡಿ (Dr. Krishnappa Konchadi) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ದಲಿತರು ಮತ್ತು ಆದಿವಾಸಿ ಸಮುದಾಯದವರು ಈ ನೆಲದ ಮೂಲ ವಾರೀಸುದಾರರು. ಆದರೆ ಇಂದು ಈ ಭೂಮಿಯ ಮೂಲ ನಿವಾಸಿಗಳಾಗಿರುವ ದಲಿತರು 2- 3ಸೆನ್ಸ್ (2- 3sense) ಜಾಗವನ್ನು ಪಡೆದುಕೊಳ್ಳಲು ಹರಸಾಹಸ ಪಡುವಂತಹ ಸ್ಥಿತಿಯಲ್ಲಿದ್ದಾರೆ.
ಇದನ್ನ ಓದಿ: ಸಮಾಜ ಸೇವೆಯಲ್ಲಿ ಎತ್ತಿದ ಕೈ ಮಿಥುನ್ ರೈ
ಭೂಮಿಯ ಪ್ರಶ್ನೆ (The question of land), ಆರೋಗ್ಯ, ಉದ್ಯೋಗದ ಪ್ರಶ್ನೆ ಬಂದಾಗ ಹಾಗೂ ದಬ್ಬಾಳಿಕೆ, ಶೋಷಣೆಗೆ ನಮ್ಮನ್ನು ಒಳಪಡಿಸುವ ಪ್ರಯತ್ನಗಳು ನಡೆದಾಗ ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಸೇರಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಉತ್ತರ ನೀಡಬೇಕಾಗಿದೆ ಎಂದರು.
ದಲಿತರ ಅಹವಾಲು ಸ್ವೀಕಾರ ಸಭೆಗಳು ರಾಜ್ಯದಲ್ಲಿ ನಡೆಯುತ್ತಿದ್ದು ಇದು ಕೇವಲ ನಾಮಕಾವಸ್ಥೆಗೆ ಸೀಮಿತವಾಗಿದೆ ಹೊರತು ಯಾವುದೇ ಸಮಸ್ಯೆಗಳು ಪರಿಹಾರವಾಗುತ್ತಿಲ್ಲ. ಈ ಬಗ್ಗೆ ಜಾತಿ ನಾಯಕರು ಕೂಡಾ ಅಧಿಕಾರಿಗಳಲ್ಲಿ ಪ್ರಶ್ನಿಸಿ ನಿಷ್ಠೂರವಾದಿಗಳಾಗಲು ತಯಾರಿಲ್ಲ. ದಲಿತ ಸಮುದಾಯದ ಮೇಲೆ ಅಗೋಚರವಾದ ದಾಳಿ ನಡೆಯುತ್ತಿದ್ದು ಇದರಿಂದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಕುಂಟಿತಗೊಳ್ಳುತ್ತಿದೆ ಇದರಿಂದಾಗಿ ದೌರ್ಜನ್ಯಗಳು ಹೆಚ್ಚಾಗುತ್ತಿದೆ ಎಂದರು. ಕರ್ನಾಟಕ ಪ್ರಾಂತ ರೈತ ಸಂಘದ (Karnataka State Farmers Association) ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ (District Secretary Yadava Shetty) ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ದಲಿತ ಹಕ್ಕುಗಳ ದ.ಕ.ಜಿಲ್ಲಾಧ್ಯಕ್ಷ ತಿಮ್ಮಯ್ಯ ಕೊಂಚಾಡಿ, ಜಿಲ್ಲಾ ಪ್ರಧಾನ ಸಂಚಾಲಕ ಕೃಷ್ಣಪ್ಪ ಕೊಣಾಜೆ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ದಲಿತ ಹಕ್ಕುಗಳ (Dalit rights) ಜಿಲ್ಲಾ ಸಮಿತಿಯ ಕಾರ್ಯದರ್ಶಿ ಗಿರಿಜಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಜಿಲ್ಲಾ ಸಂಚಾಲಕ ಕೃಷ್ಣ ತಣ್ಣೀರುಬಾವಿ ವಂದಿಸಿದರು.