ಮೂಡುಬಿದಿರೆ: ಜಿಲ್ಲಾ ಕಂಬಳ (Kambala) ಸಮಿತಿಯ ಆಶ್ರಯದಲ್ಲಿ ಕೋಣಗಳ ಯಜಮಾನರ ತುರ್ತುಸಭೆಯು ಒಂಟಿಕಟ್ಟೆ (Ontikatte) ಕಡಲಕೆರೆ ನಿಸರ್ಗಧಾಮದ ಬಳಿಯಿರುವ ಸೃಷ್ಟಿ ಸಭಾಂಗಣದಲ್ಲಿ (Srishti Hall) ಬುಧವಾರ (Wednesday) ಸಾಯಂಕಾಲ ನಡೆಯಿತು.
ಕಂಬಳ ಕೂಟಗಳ ನಿಯಮಾವಳಿಗೆ ಸಂಬಂಧಿಸಿದಂತೆ ಕೆಲವೊಂದು ತಿದ್ದುಪಡಿಗಳಿಗೆ ಈ ಸಭೆಯಲ್ಲಿ ಚರ್ಚೆಗಳಾಗಿದ್ದು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಸಮಿತಿಯ ಅಧ್ಯಕ್ಷ ರೋಹಿತ್ ಕುಮಾರ್ ಹೆಗ್ಡೆ (Rohit Kumar Hegde) ಅಧ್ಯಕ್ಷತೆವಹಿಸಿದರು.
ಮುಂದಿನ ಕಂಬಳಗಳಲ್ಲಿ ಎಸ್‌ಡಿಸಿಸಿನವರು (SDCC) ನೀಡಿದಂತಹ ಸೆನ್ಸಾರ್ ಸಿಸ್ಟಂ (Sensor system) ಅನ್ನು ಅಳವಡಿಸುವುದು. ಅದರ ಪೂರ್ಣ ಜವಾಬ್ದಾರಿಯನ್ನು ಕಂಗಿನ ಮನೆ ವಿಜಯಕುಮಾರ್ (Kangina house Vijayakumar) ಅವರಿಗೆ ನೀಡುವುದೆಂದು ನಿರ್ಮಾಣ ನಿರ್ಧರಿಸಲಾಯಿತು. ತಾಂತ್ರಿಕ ದೋಷಗಳಿಂದ ಸೆನ್ಸಾರ್‌ನಲ್ಲಿ ಸೆನ್ಸರ್ ತೊಂದರೆ ಉಂಟಾದಲ್ಲಿ ಮೂರನೇ ತೀರ್ಪುಗಾರರು ತೀರ್ಪು ನೀಡಲು ಅವಕಾಶ ನೀಡಲಾಯಿತು.
ಮೂರನೇ ತೀರ್ಪುಗಾರರಾಗಿ ಜಿಲ್ಲಾ ಕಂಬಳ ಸಮಿತಿ (district kambala organisation) ಮತ್ತು ಆಯಾಯ ಕಂಬಳ ಸಮಿತಿಯಿಂದ ನಿಯೋಜಿಸಲ್ಪಟ್ಟವರು ಕಾರ್ಯನಿರ್ವಹಿಸುವ ಕುರಿತು ನಿರ್ಣಯ ತೆಗೆದುಕೊಳ್ಳಲಾಯಿತು.
ತೀರ್ಪುಗಾರರು ಮದ್ಯಪಾನ ಮಾಡಿ ಕಂಬಳದಲ್ಲಿ ಭಾಗವಹಿಸುವಂತಿಲ್ಲ. ಯಾವುದೇ ಕಾರಣಕ್ಕೂ ಅಶಿಸ್ತು ಪ್ರದರ್ಶಿಸಿದಲ್ಲಿ ಅಂತಹ ತೀರ್ಪುಗಾರರನ್ನು ಮುಂದಿನ ಕಂಬಳಗಳಿಗೆ ಅಮಾನತುಗೊಳಿಸಲು ತೀರ್ಮಾನಿಸಲಾಗಿದೆ. ತೀರ್ಪುಗಾರರು ಮತ್ತು ಉದ್ಘೋಷಕರು ಕಂಬಳಕ್ಕೆ ಸಂಬಧಪಡದ ವಿಷಯಗಳನ್ನು ಪ್ರಸ್ತಾಪಿಸುವುದು ಸರಿಯಲ್ಲ. ಸ್ಪರ್ಧೆಗೆ (for competition)ಕೋಣಗಳಿಗೆ ಕರೆಕೊಟ್ಟಾಗ ತಕ್ಷಣ ಕರೆಗೆ ಬರತಕ್ಕದ್ದು ಸಕಾರಣವಿಲ್ಲದೆ ವಿಳಂಬ ಮಾಡಿದಲ್ಲಿ ಸಮಿತಿಯಲ್ಲಿ ನಿಗದಿಪಡಿಸಲಾದ ಕಾಲಮಿತಿ ಆಧಾರದಲ್ಲಿ ನಿರ್ಣಯವನ್ನು ಕೈಗೊಳ್ಳಲಾಗುವುದು.
ಮೂರನೇ ತೀರ್ಪುಗಾರರ ನೀಡುವ ತೀರ್ಮಾನ ಸಮಯ ಟಿವಿ ನೋಡಲು ಎರಡು ಕೋಣೆಗಳ ಪ್ರತಿನಿಧಿಗಳಿಗೆ ಅಥವಾ ಯಜಮಾನರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.
ಕಂಬಳ ಸಮಿತಿಯ ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ, ಜಿಲ್ಲಾ ಕಂಬಳ ಸಮಿತಿಯ ಜಿಲ್ಲಾ ಕಂಬಳ ಸಮಿತಿಯ ತೀರ್ಪುಗಾರರ ಸಂಚಾಲಕ ಸುರೇಶ್ ಕೆ ಪೂಜಾರಿ ಸಮಿತಿಯ ಜಿಲ್ಲಾ ಕಂಬಳ ಸಮಿತಿಯ ಮಾಜಿ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಪಿ.ಆರ್ .ಶೆಟ್ಟಿ ಓಟದ ಕೋಣಗಳ ಯಜಮಾನರಾದ ಶಕ್ತಿಪ್ರಸಾದ್ ಶೆಟ್ಟಿಮ ನಂದಳಿಕೆ ಶ್ರೀಕಾಂತ್ ಭಟ್,ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ, ಬಜ್ಪೆ ಗಂಧಬೆಟ್ಟು ಅರುಣ್ ಶೆಟ್ಟಿ, ಚಂದ್ರಹಾಸ್ ಸನಿಲ್, ರಂಜಿತ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.