ಮೂಡಬಿದಿರೆ: ಕರ್ನಾಟಕ ರಾಜ್ಯ ಎಸ್.ಡಿ.ಎಮ್.ಸಿ ಸಮನ್ವಯ ವೇದಿಕೆ (Karnataka State SDMC Coordination Forum), ದ.ಕ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DK and Department of School Education and Literacy), ದ.ಕ ಆಶ್ರಯದಲ್ಲಿ ಫೆ.28ರಂದು ಮಾಣಿ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶದ ಪ್ರಯುಕ್ತ ಮೂಡುಬಿದಿರೆ ವಲಯದ ಪೂರ್ವಭಾವಿ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮೂಡುಬಿದಿರೆ ಮೈನ್ ಶಾಲೆಯಲ್ಲಿ ಮಂಗಳವಾರ ನಡೆಯಿತು.
ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಗಣೇಶ್ (Field Education Officer Y. Ganesh) ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶಾಲಾಭಿವೃದ್ಧಿಯಲ್ಲಿ ಎಸ್.ಡಿ.ಎಮ್. ಸಿ.ಯ ಪಾತ್ರದ ಬಗ್ಗೆ ಮಾತನಾಡಿ ಜಿಲ್ಲಾ ಸಮಾವೇಶದಲ್ಲಿ ಎಸ್.ಡಿ.ಎಮ್.ಸಿ.ಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.
ಕರ್ನಾಟಕ ರಾಜ್ಯ ಎಸ್.ಡಿ.ಎಮ್.ಸಿ.ಸಮನ್ವಯ ವೇದಿಕೆಯ ಅಧ್ಯಕ್ಷರಾದ ಮೊಯಿದಿನ್ ಕುಟ್ಟಿ ಅವರು ಎಸ್.ಡಿ.ಎಮ್.ಸಿ ಯ ಜವಾಬ್ದಾರಿಗಳ ಬಗ್ಗೆ ಹಾಗೂ ಸಮಾವೇಶದ ಉದ್ದೇಶದ ಬಗ್ಗೆ ಮಾಹಿತಿ ನೀಡಿ ಈ ಸಮಾವೇಶದಲ್ಲಿ ಕ್ರಿಯಾಶೀಲ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ತಾಲೂಕು ಸಂಚಾಲಕರು ಹಾಗೂ ಮೂಡುಬಿದಿರೆ ಮೈನ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಚಂಚಲಾಕ್ಷಿ,ಜಿಲ್ಲಾ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರಾದ ಉಮರ್ ಫಾರೂಕ್, ಜಿಲ್ಲಾ ಸದಸ್ಯರಾದ ಉಸ್ಮಾನ್ ನೆಕ್ಕೀಲು,ಸ್ಥಳೀಯ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಆದರ್ಶ್ ಈ ಸಭೆಯಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಇದನ್ನ ಓದಿ: ‘ಸಹ ಯಾನದ ಮಾನ’ ಶತಮಾನ ಗೀತೆಯ ನೃತ್ಯ ಪ್ರದರ್ಶನ
ಶಾಲಾ ಮುಖ್ಯೋಪಾಧ್ಯಾಯಿನಿ ಅನಸೂಯಾ ಅವರು ಸ್ವಾಗತಿಸಿ, ಮೂಡುಬಿದಿರೆ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ನಾಗವೇಣಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.