ಮೂಡುಬಿದಿರೆ: ಆಳ್ವಾಸ್ ನಿರಾಮಯ ಮಲ್ಟಿ ಸ್ಪೆಷಾಲಿಟಿ ಆಯುಷ್ ಆಸ್ಪತ್ರೆಯಲ್ಲಿ (Alwas Niramaya Multi Specialty Ayush Hospital) ವಿಶ್ವ ಪಾರ್ಕಿನ್‌ಸನ್ಸ್ ಜಾಗೃತಿ ದಿನದ ಪ್ರಯುಕ್ತ ನಡೆಯಲಿರುವ ಮಾಹಿತಿ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಲಾಯಿತು.
ಆಳ್ವಾಸ್ ಹೆಲ್ತ್ ಸೆಂಟರ್‌ನ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆ (Laparoscopic surgery), ಪ್ರಸೂತಿ ಮತ್ತು ಸ್ತ್ರೀರೋಗ ತಜ್ಙೆ ಡಾ.ಹನಾ ಶೆಟ್ಟಿ ಶಿಬಿರ ಉದ್ಘಾಟಿಸಿದರು. ಶಿಬಿರದ ಆಯೋಜನೆಗೆ ಒಂದು ಬಲಿಷ್ಠ ತಂಡದ ಪ್ರಯತ್ನ ಇದ್ದು, ರೋಗಿಗಳ ಹಿತಾಸಕ್ತಿಯಲ್ಲಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಹಾಗೂ ಈ ಶಿಬಿರವು ಹೆಚ್ಚು ರೋಗಿಗಳಿಗೆ ಉಪಯುಕ್ತವಾಗಲಿ ಎಂದು ಶುಭ ಹಾರೈಸಿದರು.
ಇದನ್ನ ಓದಿ: ಮೂಡುಬಿದಿರೆಯಲ್ಲಿ ತುಳು ಮಹಾಕೂಟ -2023 ಆಯೋಜನೆ
ಆಳ್ವಾಸ್ ಆಯುರ್ವೇದ ಸ್ನಾತಕೋತ್ತರ ವಿಭಾಗದ ಡೀನ್ ಡಾ.ರವಿಪ್ರಸಾದ್ ಹೆಗ್ಡೆ, ಪಾರ್ಕಿನ್ಸನ್ಸ್ ರೋಗ (Parkinson’s disease) ಮತ್ತು ಚಿಕಿತ್ಸೆಯ ಮಾಹಿತಿಯನ್ನು ಎಲ್ಲರೂ ತಿಳಿದುಕೊಳ್ಳುವುದು ಅತ್ಯಗತ್ಯ, ದೈನಂದಿನದ ಚಟವಟಿಕೆಗಳನ್ನು ಮಿತಿಗೊಳಿಸುವ ಈ ಕಾಯಿಲೆಯಲ್ಲಿ ಆಯುರ್ವೇದದ ಚಿಕಿತ್ಸಾ ಪದ್ಧತಿಯು ಅತ್ಯುನ್ನತ ಪ್ರಾಮುಖ್ಯತೆಯನ್ನು ಹೊಂದಿದ್ದು, ಶಿಬಿರದ ಮೂಲಕ ಲಭ್ಯವಿರುವ ಎಲ್ಲಾ ಸೌಲಭ್ಯಗಳ ಸಂಪೂರ್ಣ ಸದುಪಯೋಗವನ್ನು ಪಡೆಯಬಹುದಾಗಿದೆ ಎಂದರು. ಪ್ರಾಂಶುಪಾಲ ಡಾ. ಸಜಿತ್.ಎಂ. ಉಪಸ್ಥಿತರಿದ್ದರು. ಆಳ್ವಾಸ್ ನಿರಾಮಯ ವೈದ್ಯಕೀಯ ನಿರ್ದೇಶಕಿ ಡಾ.ಸುರೇಖಾ ಪೈ (Alwas Niramaya Medical Director Dr. Surekha Pai) ಸ್ವಾಗತಿಸಿದರು. ಡಾ.ರೈನಿ ವಂದಿಸಿದರು. ಡಾ.ಅಮೃತೇಶ್ವರಿ ಪ್ರಾರ್ಥಿಸಿ, ಡಾ.ಇಂಪು ನಿರೂಪಿಸಿದರು.