ಮೂಡುಬಿದಿರೆ: ಪ್ರಧಾನಿಮಂತ್ರಿಯವರೊಂದಿಗೆ ಪರೀಕ್ಷಾ ಪೇ ಚರ್ಚಾ(Exam Pay Discussion), ಗಣರಾಜ್ಯೋತ್ಸವ (Republic Day)ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಯಾವುದೇ ಸಹಕಾರ ನೀಡದೆ, ನಿರ್ಲಕ್ಷತನವನ್ನು ತೋರಿಸಿದೆ. ಈ ಕುರಿತು ಮಕ್ಕಳ ಸಹಾಯವಾಣಿ(Children’s Helpline) ಹಾಗೂ ಪ್ರಧಾನಿ ಕಾರ್ಯಾಲಯಕ್ಕೆ(Prime Minister’s Office) ಟ್ವಿಟ್ ಮುಖೇನ ದೂರು ಸಲ್ಲಿಸಿದ್ದು, ಪ್ರಧಾನಿ ಕಾರ್ಯಾಲಯದಿಂದ ತನಿಖೆ ನಡೆಸುವ ಭರವಸೆ ಲಭಿಸಿದೆ ಎಂದು ಪರೀಕ್ಷಾ ಪೇ ಚರ್ಚಾದಲ್ಲಿ ಭಾಗವಹಿಸಿದ್ದ ರೋಟರಿ ಶಾಲೆಯ ವಿದ್ಯಾರ್ಥಿ ಪ್ರಹ್ಲಾದ್ ಮೂರ್ತಿ (Prahlad Murthy)ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯದಿಂದ(Karnataka State) ಆಯ್ಕೆಯಾದ ನಾಲ್ವರಲ್ಲಿ ನಾನೂ ಭಾಗವಹಿಸಿದ್ದು, ಒಡಿಸ್ಸಾದಲ್ಲಿ (Odisa)ನಡೆದ ರಾಷ್ಟ್ರಮಟ್ಟದ ಕಲೋತ್ಸವದಲ್ಲಿ(State level Kalosthsava) ನಾಟಕ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದೇನೆ. ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ಪರೀಕ್ಷಾಪೇ ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತ್ತು. ಕಲೋತ್ಸವ ಹಾಗೂ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮಕ್ಕೆ ರಾಜ್ಯವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಭಾಗವಾದ ಡಿಎಸ್‌ಇಆರ್‌ಟಿ ವಿಭಾಗ (DSERT)ವಹಿಸಬೇಕಾಗಿತ್ತು. ನೋಡೆಲ್ ಅಧಿಕಾರಿಗಳು, ಅಧಿಕಾರಿಗಳ ಅಸಮರ್ಪಕ ಸಂವಹನ ಹಾಗೂ ಬೇಜವಾಬ್ದಾರಿ ವರ್ತನೆಯಿಂದಾಗಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ತೀವ್ರ ತೊಂದರೆಯುಂಟಾಯಿತು.
ಬಳಿಕ ಸಂಸದ, ಶಾಸಕ, ಸೇರಿದಂತೆ ಪೇಜಾವರ ಶ್ರೀಗಳ ಸಹಕಾರದೊಂದಿಗೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳಲು ಅವಕಾಶ ಲಭಿಸಿತು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ತೀವ್ರ ನೋವುಂಟಾಗಿದೆ. ಇತರೆ ರಾಜ್ಯಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳು ದೆಹಲಿಗೆ ತೆರಳಲು ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟದ ಅಧಿಕಾರಿಗಳು ರೈಲ್ವೇ ವ್ಯವಸ್ಥೆ ಮಾಡಿ ಕೈತೊಳೆದುಕೊಂಡಿದ್ದರು. ಒಂದೇ ಬೋಗಿಯಲ್ಲಿ ಟಿಕೇಟ್ ವ್ಯವಸ್ಥೆ ಮಾಡದೆ ಅಲ್ಲೂ ತೊಂದರೆ ನೀಡಿದ್ದಾರೆ. ಊಟದ ವ್ಯವಸ್ಥೆಯಲ್ಲೂ ಅವ್ಯವಸ್ಥೆ ಮಾಡಿದ್ದಾರೆ ಎಂದು ದೂರಿದರು. ನಮಗಾದ ಕಹಿ ಅನುಭವ ಇನ್ಯಾವ ವಿದ್ಯಾರ್ಥಿಗಳಿಗೆ ಆಗದಿರಲಿ ಎಂಬ ಸದುದ್ದೇಶದಿಂದ ದೂರು ನೀಡಿರುತ್ತೇನೆ. ದೂರನ್ನು ಹಿಂಪಡೆಯುವಂತೆ ನೋಡೆಲ್ ಅಧಿಕಾರಿ ಮಹಾದೇವಮ್ಮ ಅವರು ಎಸ್ಕಾರ್ಟ್ ಅಧಿಕಾರಿ (Escart officer)ಛಾಯಾ ಅವರ ಮೂಲಕ ಒತ್ತಡ ಹೇರುತ್ತಿದ್ದಾರೆ ಎಂದು ಪ್ರಹ್ಲಾದ್‌ಮೂರ್ತಿ ಆರೋಪಿಸಿದರು.
ಇದನ್ನ ಓದಿ: ಪರೀಕ್ಷಾ ಪೇ ಚರ್ಚಾ ಸಂವಾದಕ್ಕೆ ಪ್ರಹ್ಲಾದ ಮೂರ್ತಿ ಆಯ್ಕೆ
ರೋಟರಿ ಎಜ್ಯುಕೇಶನ್ ಸೊಸೈಟಿ(Rotary Education Society) ಅಧ್ಯಕ್ಷ ನಾರಾಯಣ ಪಿ.ಎಂ, ಉಪಾಧ್ಯಕ್ಷ ಅಬ್ದುಲ್ ರವೂಫ್ ವಿವಿಧ ವಿಭಾಗಗಳ ಮುಖ್ಯಸ್ಥರಾದ ಮೋಹನ್ ಭಟ್, ಶೀಲಾ ಕಾಂತರಾಜ್, ರೂಪಾ ಮಸ್ಕರೇನಿಯಸ್, ತಿಲಕ ಅನಂತವೀರ್ ಜೈನ್, ಪ್ರವೀಣ್ ಚಂದ್ರ ಜೈನ್, ಮೋಹನ್ ಹೊಸ್ಮಾರ್, ಸತೀಶ್, ನಿತೀಶ್ ಕುಮಾರ್, ಗಜಾನನ ಮರಾಠೆ ಉಪಸ್ಥಿತರಿದ್ದರು.