ಮೂಡುಬಿದಿರೆ: ಕಳೆದ 28 ವರ್ಷಗಳ ಕಾಲ ಅಂಗನವಾಡಿ ಕಾರ್ಯಕರ್ತೆಯಾಗಿ (Anganwadi worker) ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಬನ್ನಡ್ಕ ಅಂಗನವಾಡಿ ಕೇಂದ್ರದ (Bannadka Anganwadi Centre) ಕಾರ್ಯಕರ್ತೆ ಭಾರತಿ ಜೈನ್ ಅವರನ್ನು ಸ್ತ್ರೀಶಕ್ತಿ ತಂಡದ ಸದಸ್ಯರು ಸನ್ಮಾನಿಸಿ ಬೀಳ್ಕೊಟ್ಟರು.
ಇದನ್ನ ಓದಿ: ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕಕ್ಕೆ ಮುತ್ತಿಕ್ಕಿದ ಲಕ್ಷ್ಮಿ ಬಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ (Department of Women and Child Development) ಬೆಳುವಾಯಿ ವಲಯದ ಮೇಲ್ವಿಚಾರಕಿ ರತಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸ್ತ್ರೀ ಶಕ್ತಿ ಸಂಘಗಳು ರಚನೆಯಾದ ನಂತರ ಮಹಿಳೆಯರು ವ್ಯವಹಾರಿಕವಾಗಿ ಅಭಿವೃದ್ಧಿಯನ್ನು ಹೊಂದಿದ್ದಾರೆ. ಇದರಿಂದಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಅವರು ತಮ್ಮನ್ನು ತೊಡಗಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಪಡುಮಾರ್ನಾಡು ಗ್ರಾಪಂ (Padumarnadu Grampanchayath) ಸದಸ್ಯೆ ಟೆಸ್ಲಿನಾ, ಬಾಲವಿಕಾಸ ಸಮಿತಿಯ ಮಾಜಿ ಅಧ್ಯಕ್ಷೆ ಶೋಭಾ ವಸಂತ್, ಆಶಾ ಕಾರ್ಯಕರ್ತೆ ಶೋಭಾ ದಿನೇಶ್, ಅಂಗನವಾಡಿ ಸಹಾಯಕಿ ಶಾಂತಿ, ದೀಪಶ್ರೀ, ಭಾಗ್ಯಶ್ರೀ, ಪೂಜಶ್ರೀ, ರಾಜಶ್ರೀ, ತೇಜಶ್ರೀ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುಮನಾ ಯಶವಂತ ಸ್ವಾಗತಿಸಿದರು. ರೂಪಕಿರಣ್ ವಂದಿಸಿದರು.