ಮೂಡುಬಿದಿರೆ: ಕನ್ನಡಕ್ಕೆ ಒಂದು ಪರಂಪರೆಯ ಹಿನ್ನೆಲೆ ಇದೆ. ಸಮನ್ವಯತೆಯ ಪರಿಕಲ್ಪನೆ ಇಟ್ಟುಕೊಂಡಾಗ ಮಾತ್ರ ನುಡಿ ಸಾಧ್ಯ. ನುಡಿಯ ಪರಿಕಲ್ಪನೆಯಿಂದ ಕನ್ನಡವನ್ನು ಸಶಕ್ತಗೊಳಿಸುವ ಅಗತ್ಯವಿದೆ. ಕನ್ನಡ ಪರಿಷತ್ತಿನ ಬೆಳವಣಿಗೆಗೆ ನಾಡು, ನುಡಿ, ಸಾಹಿತ್ಯ ಎಂಬ ಮೂರು ಪರಿಕಲ್ಪನೆಗಳು ಅತಿ ಅಗತ್ಯ. ಕನ್ನಡ ಭಾಷೆಯ ಕುರಿತಾಗಿ ಸಂಶೋದನೆ ಕೈಗೊಳ್ಳಬೇಕು. ಎಂದು ಖ್ಯಾತ ಲೇಖಕ ಹಾಗೂ ಚಿಂತಕ ಅರವಿಂದ ಚೊಕ್ಕಾಡಿ (Aravinda Chokkadi) ಹೇಳಿದರು.
ಇದನ್ನ ಓದಿ: ಆಳ್ವಾಸ್ ಅಭಿವ್ಯಕ್ತಿ ವೇದಿಕೆಯಿಂದ ವಿಶೇಷ ಉಪನ್ಯಾಸ
ಮೂಡುಬಿದಿರೆ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ ರತ್ನಾಕರವರ್ಣಿ ಸಭಾಭವನದಲ್ಲಿ (At Ratnakaravarni Sabhabhavan) ಶುಕ್ರವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ (Foundation Day of Kannada Sahitya Parishad) ಅವರು ಮಾತನಾಡಿದರು.
ಮೂಡುಬಿದಿರೆ ತಾಲೂಕು ಕಸಾಪ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಉಪಸ್ಥಿತರಿದ್ದರು. ಸದಾನಂದ ನಾರಾವಿ ವಂದಿಸಿದರು. ವಿಜಯಲಕ್ಷಿö್ಮ ಮಾರ್ಲ ನಿರೂಪಿಸಿ ಸ್ವಾಗತಿಸಿದರು.