ಮೂಡುಬಿದಿರೆ: ಬೆಳುವಾಯಿ ಗ್ರಾಪಂ ವ್ಯಾಪ್ತಿಯ (Beluvai Gram Panchayat Range) ವಿವಿಧ ಕಡೆಗಳಲ್ಲಿ ರೂ.7.5 ಕೋ.ವೆಚ್ಚದ ವಿವಿಧ ಕಾಮಗಾರಿಗಳ (Various works) ಉದ್ಘಾಟನೆ ಮತ್ತು ರೂ.13 ಕೋ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಉಮಾನಾಥ ಕೋಟ್ಯಾನ್ (MLA Umanatha Kotyan)ಮಂಗಳವಾರ ಶಿಲಾನ್ಯಾಸ ನೆರವೇರಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷ – ಜಾತಿ ಬೇಧ ಮರೆತು ರೂ 2000 ಕೋ.ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಶಾಸಕನಾಗಿ ಆಯ್ಕೆಯಾದ ಮೊದಲ ಎರಡು ವರ್ಷ ಕೊರೋನಾದಿಂದ ಸ್ವಲ್ಪ ತೊಂದರೆಯಾಯಿತು. ಇಲ್ಲದಿದ್ದರೆ ರೂ. 5000 ಕೋ.ರೂಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಬಹುದಿತ್ತು. ಬೆಳುವಾಯಿ ಗ್ರಾಪಂ ವ್ಯಾಪ್ತಿಯಲ್ಲಿ ರೂ .100 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಇತ್ತೀಚೆಗೆ ತಾನು ಮಾತನಾಡಿದ ವೀಡಿಯೋ ತುಣುಕೊಂದನ್ನು ಹಿಡಿದು ತನ್ನ ತೇಜೋವಧೆ ಮಾಡುವ ಕೆಲಸ ವಿಘ್ನ ಸಂತೋಷಿಗಳಿಂದ ನಡೆಯುತ್ತಿದೆ. ಮುಸ್ಲಿಂರು ಮತ್ತು ಕ್ರಿಶ್ಚಿಯನ್ನರು ನಮಗೆ ಓಟು ಹಾಕುವುದಿಲ್ಲ ಎಂಬ ಭಾವನೆ ಬಿಜೆಪಿಗರಲ್ಲಿದ್ದರೆ, ಎರಡೂ ಸಮಾಜದವರು ನಮಗೆ ಓಟು ಹಾಕುತ್ತಾರೆಂಬ ಭಾವನೆ ಕಾಂಗ್ರೆಸಿಗರಲ್ಲಿದೆ ಎಂದು ನಾನು ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಸನ್ಮಾನ: ಬೆಳುವಾಯಿವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ರೂ.100 ಕೋ.ಅನುದಾನವನ್ನು ಒದಗಿಸಿರುವುದಕ್ಕೆ 7ನೇ ವಾರ್ಡಿನ ಸದಸ್ಯ ಭರತ್ ಶೆಟ್ಟಿ ನೇತೃತ್ವದಲ್ಲಿ ಗ್ರಾಮಸ್ಥರು ಕೋಟ್ಯಾನ್ ಅವರನ್ನು ಸನ್ಮಾನಿಸಿದರು. 130 ಕುಟುಂಬಗಳಿಗೆ ಹಕ್ಕುಪತ್ರವನ್ನು ವಿತರಿಸಿರುವ ಫಲಾನುಭವಿಗಳು ಕೋಟ್ಯಾನ್ ಅವರಿಗೆ ಹೂವನ್ನು ನೀಡಿ ಗೌರವಿಸಿದರು.
ಬೆಳುವಾಯಿ ಗ್ರಾಪಂ ಅಧ್ಯಕ್ಷೆ ಸುಶೀಲಾ (Beluwai Village Chairperson Sushila) , ಉಪಾಧ್ಯಕ್ಷ ರವೀಂದ್ರ ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ್ ಆಳ್ವ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಶೆಟ್ಟಿಗಾರ್, ಕೇಶವ ಕರ್ಕೇರ,ಮೂಡಾ ಅಧ್ಯಕ್ಷ ಮೇಘನಾಥ ಶೆಟ್ಟಿ, ಭೂನ್ಯಾಯ ಮಂಡಳಿಯ (Board of Land Justice) ಸದಸ್ಯ ಹರ್ಷವರ್ಮ ಹೆಗ್ಡೆ ಮಾಲಾಡಿ, ವಿ.ಹಿಂ.ಪ ತಾಲೂಕು ಕಾರ್ಯಧ್ಯಕ್ಷ ಶ್ಯಾಮ ಹೆಗ್ಡೆ, ಕೆಸರ್‌ಗದ್ದೆ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಶೆಟ್ಟಿ (Kesargadde Shakti Kendra President Sadananda Shetty), ಹೋಮಲ್ಕೆ ಶಕ್ತಿ ಕೇಂದ್ರದ ಅಧ್ಯಕ್ಷ ಸೂರಜ್ ಆಳ್ವ ಅತಿಥಿಗಳಾಗಿ ಭಾಗವಹಿಸಿದ್ದರು. ಗ್ರಾ.ಪಂ.ಸದಸ್ಯರು ಉಪಸ್ಥಿತರಿದ್ದರು.
ಇದನ್ನ ಓದಿ: ಮೂಡುಬಿದಿರೆ ಪುರಸಭೆ 31.07ಕೋಟಿ ಮಿಗತೆ ಬಜೆಟ್ ಮಂಡನೆ
ಬೆಳುವಾಯಿ ಗ್ರಾ.ಪಂ.ನ ಮಾಜಿ ಅಧ್ಯಕ್ಷ ಭಾಸ್ಕರ್ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೋಮನಾಥ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.ಶಿವರಾಮ ಹೆಗ್ಡೆ ವಂದಿಸಿದರು.