News Karnataka
Wednesday, June 07 2023
ಕ್ಯಾಂಪಸ್

50ನೇ ವರ್ಷದ ಸಾರ್ವಜನಿಕ ‘ಸತ್ಯನಾರಾಯಣ ಪೂಜೆ’

Photo Credit : NewsKannada

ಮೂಡುಬಿದಿರೆ: ಮರೆವು ಸಹಜವಾಗಿರುವ ಇಂದಿನ ದಿನಗಳಲ್ಲಿ ಸಮಿತಿ ಹಾದು ಬಂದ ಹಾದಿಯಲ್ಲಿ ತ್ಯಾಗ, ಪರಿಶ್ರಮ ತೋರಿರುವ ವ್ಯಕ್ತಿಗಳನ್ನು, ಹಿರಿಯರನ್ನು ಮರೆಯದೆ ಗೌರವಿಸುವ, ಸ್ಮರಿಸುವ ಕಾರ್ಯ ನಡೆಯಬೇಕು ಎಂದು ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿ( muktanand Swami ji) ನುಡಿದರು.

ಮೂಡುಬಿದಿರೆ ಗಾಂಧಿನಗರದ( Gandhinagar)ಕಟ್ಟೆಯಲ್ಲಿ ನಡೆದ 50ನೇ ವರ್ಷದ ಶ್ರೀ ಸಾರ್ವಜನಿಕ ಸತ್ಯನಾರಾಯಣ ಪೂಜೆಯಂಗವಾಗಿ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಅಧ್ಯಕ್ಷ ಜಯರಾಮ ಕೋಟ್ಯಾನ್( Jayarama kotian) ಅಧ್ಯಕ್ಷತೆವಹಿಸಿದ್ದರು.

ಶಾಸಕ ಉಮಾನಾಥ ಎ(MLA Umanatha A). ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್(Abhayachandra Jain), ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಆಳ್ವಾಸ್ ಶಿಕ್ಷಣ ಸಂಸ್ಥೆಯ(Alvas Education Foundation)ಅಧ್ಯಕ್ಷ ಡಾ.ಮೋಹನ ಆಳ್ವ(Mohan Alva), ಉದ್ಯಮಿ ಕೆ. ಶ್ರೀಪತಿ ಭಟ್, ಇನ್ನರ್‌ವೀಲ್ ಮಾಜಿ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ, ಪುರಸಭೆ ವಾರ್ಡ್ ಸದಸ್ಯೆ ದಿವ್ಯಾ ಜಗದೀಶ್ ಭಾಗವಹಿಸಿದ್ದರು. ಸಮಿತಿ ಉಪಾಧ್ಯಕ್ಷ ದಿನೇಶ್ ನಾÊಕ್, ದಿನೇಶ್ ಪಟ್ಲಬರಿ, ದಿನೇಶ್ ಎಂ.ಕೆ., ಕೋಶಾಧಿಕಾರಿ ಸದಾನಂದ ಪೂಜಾರಿ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

ಕಳೆದ 24 ವರ್ಷಗಳಲ್ಲಿ ಪೂಜಾ ಕೈಂಕರ್ಯ ನಡೆಸಿಕೊಂಡು ಬರುತ್ತಿರುವ ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ಸಮಿತಿಯ ಸಹವರ್ತಿಗಳಾಗಿರುವ ಅಶೋಕ ಅಮೀನ್, ಮಹಾಬಲ ಕೋಟ್ಯಾನ್, ರಂಗಕರ್ಮಿ ಅಚ್ಯುತ ಅಂಚನ್, ಸ್ವಚ್ಛತೆ ಕಾರ್ಮಿಕೆ ಚಿಂಗು, ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಕರಗ ನೃತ್ಯ ಕಲಾವಿದ ವೆಂಕಟೇಶ ಬಂಗೇರ ಅವರನ್ನು ಸನ್ಮಾನಿಸಲಾಯಿತು. ರೇಷ್ಮಾ ಪ್ರೇಮನಾಥ ಕರ್ಕೇರ, ಜಯಂತಿ ಸುಧಾಕರ, ವಿನುತಾ ಆನಂದ, ವಿಮಲ ಹರೀಶ್ ಸನ್ಮಾನ ಪತ್ರ ವಾಚಿಸಿದರು.

ವಿವಿಧ ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಜಯರಾಮ ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು. ರಾಜೀವ ಎಸ್.ಕ್ರೀಡಾ ಸ್ಪರ್ಧೆಗಳ ಫಲಿತಾಂಶ ವಿವರ ನೀಡಿದರು. ಕಾರ್ಯದರ್ಶಿ ಹರೀಶ್ ಎಂ.ಕೆ. ವಂದಿಸಿದರು. ಧನಂಜಯ ಮೂಡುಬಿದಿರೆ ನಿರೂಪಿಸಿದರು.

ಬಳಿಕ ಸುಂಕದಕಟ್ಟೆ(sunkhada katte)ಮೇಳದವರಿಂದ `ಅಜ್ಜೆ ಕೊರಗಜ್ಜೆ'(Ajje koragajje) ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

NewsKannada

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *