ಮೂಡುಬಿದಿರೆ: ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಯಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಿಂದ ನಡೆದ ದೇಶ-ವಿದೇಶದ ವಿದ್ಯಾರ್ಥಿಗಳಿಗೆ ನಡೆದ ರಂಗಭೂಮಿ ತರಬೇತಿ ಕಾರ್ಯಾಗಾರದಲ್ಲಿ ಸುಮಾರು 15 ಸಾವಿರ ಸ್ಕೌಟ್‌ಗೈಡ್ಸ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪೂರ್ವರಂಗ, ರಂಗ ವ್ಯಾಯಾಮ, ರಂಗಾಟ, ರಂಗ ಚಲನೆ, ರಂಗಾಭಿನಯ, ಗೀತಾಭಿನಯ, ರಂಗ ಶಿಸ್ತು, ಬದುಕಿನ ಪಾಠ, ವಿವಿಧ ಕಲಾ ಪ್ರಕಾರಗಳ ಕುರಿತು ಡಾ. ಜೀವನ್ ರಾಂ ಸುಳ್ಯ ಅವರ ನೇತೃತ್ವದಲ್ಲಿ ರಂಗ ಅಧ್ಯಯನ ಕೇಂದ್ರದ ಸದಸ್ಯರು ತರಬೇತಿ ನೀಡಿದರು. ಉಜ್ವಲ್ ಮಂಗಳೂರು ಮತ್ತು ಭುವನ್ ಮಣಿಪಾಲ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.