ಮೂಡುಬಿದಿರೆ: ಭಾವನೆಗಳು ಮನೆಯಂಗಳದಲ್ಲಿ ಅರಳುತ್ತದೆ. ಅಂಗಳವು ಮನಸ್ಸನ್ನು ಕಟ್ಟುವಂತೆ ಮತ್ತು ಬೆಸೆಯುವಂತೆ ಸಾಹಿತ್ಯವೂ ಕೂಡಾ ಹೊಸತನವನ್ನು ಸೃಷ್ಟಿಸುವ, ಪೊರೆಯುವ ಹಾಗೂ ಹೊಸ ಮಾನವೀಯತೆಯ ಅಂಶಗಳನ್ನು ನಮ್ಮೊಳಗೆ ಇಡುವಂತದ್ದು ಎಂದು ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ.ಸುಧಾರಾಣಿ ಹೇಳಿದರು.(Lecturer, Alwas College)
ಅವರು ಆಸಕ್ತರ ವೇದಿಕೆ (Forum of interested parties) ವತಿಯಿಂದ ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ರಿ) (Akhil Bharatiya Sahitya Parishad (R) Karnataka) ಕರ್ನಾಟಕ -ವೇಣೂರು ಘಟಕದ ಸಹಯೋದಲ್ಲಿ ಮಾಸ್ತಿಕಟ್ಟೆ ಏದಾಡಿಗುತ್ತಿನ “ಆತಿಥ್ಯ”ದಲ್ಲಿ ಭಾನುವಾರ ನಡೆದ ಮನೆಯಂಗದಲ್ಲೊಂದು ಸಾಹಿತ್ಯ ಸಂಜೆ ಅಭಿಯಾನದ ಎರಡನೇ ತಿಂಗಳ ನ್ಯಾನೋ ಕಥಾಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ವಿವಿಯ (Mangalore University)ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಅತೀ ಅನಿರೀಕ್ಷಿತ ತಿರುವು, ಒಂದು ಪಂಚ್ ಹಾಗೂ ಕೆಲವೇ ಶಬ್ದಗಳಲ್ಲಿ ನಿರೂಪನೆಗೊಳ್ಳುವ ಸಾಮರ್ಥ್ಯ ಹಾಗೂ ಕೆಲವೇ ಕ್ಷಣಗಳಲ್ಲಿ ಬಹಳಷ್ಟು ಅರ್ಥಗಳನ್ನು ಅಭಿವ್ಯಕ್ತಪಡಿಸುವ ಗುಣಗಳು ನ್ಯಾನೋ ಕತೆಗಳಲ್ಲಿವೆ ಎಂದರು.
ಇದನ್ನ ಓದಿ: ಮೂಡುಬಿದಿರೆಯಲ್ಲಿ 12ನೇ ರಾಜ್ಯಮಟ್ಟದ ರಾಣೆಯಾರ್ ಸಮಾವೇಶ
ಡಾ.ಸುರೇಶ್ ನೆಳಗುಳಿ( Dr. Suresh Nelaguli), ರೇಮಂಡ್ ಡಿ” ಕುನ್ಹ, ಸುಭಾಶಿನಿ ರೈ ಬೆಳ್ತಂಗಡಿ, ಡಾ.ದಿವ್ಯಶ್ರೀ ಡೆಂಬಳ, ಮೋಹನ್ ಹೊಸ್ಮಾರು, ಸದಾನಂದ ನಾರಾವಿ, ಮಾನಸ ಮಾಂಟ್ರಾಡಿ, ಆನಂದ್, ಅನಿತಾ ಶೆಟ್ಟಿ ಹಾಗೂ ವೇದಿಕೆಯಲ್ಲಿದ್ದ ಹರೀಶ್ ಕೆ.ಅದೂರು, ಡಾ.ರಶ್ಮೀ ವಿ.ಅರಸ್ ನ್ಯಾನೋ ಕಥೆಗಳನ್ನು ವಾಚಿಸಿದರು. ಮತ್ತು ಕಾರ್ಯಕ್ರಮ ನಿರೂಪಿಸಿದ ಪತ್ರಕರ್ತ ಧನಂಜಯ ಮೂಡುಬಿದಿರೆ ಸಹಿತ ಛಾಯಾಗ್ರಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವರಾಜ್ ಕರ್ಕೇರಾ ಹಾಗೂ ಧನ್ಯವಾದ ಸಮರ್ಪಿಸಿದ ಹೃದಿ ತಾವು ಸ್ಥಳದಲ್ಲಿಯೇ ರಚಿಸಿದ ನ್ಯಾನೋ ಕತೆಗಳನ್ನು ವಾಚಿಸಿದರು.
ಇದಕ್ಕೂ ಮೊದಲು ಚದುರಂಗ ಶಾಲೆಯ ವಿದ್ವಾನ್ ಎನ್.ಎಸ್.ಭಂಡಾರಿ ಬಳಗದ ವಿದ್ಯಾರ್ಥಿಗಳಿಂದ ಗಾನ ಸಂಜೆ ಪ್ರಸ್ತುತಗೊಂಡಿತು.