ಮೂಡುಬಿದಿರೆ: ವಿಶ್ವವಿದ್ಯಾನಿಲಯದಲ್ಲಿ ಕ್ರೀಡೆಗೆ ಅಗತ್ಯವಿರುವ ಸಂಪನ್ಮೂಲವಿದ್ದು, ಅದರ ಸದ್ಬಳಕೆ ಆಗುತ್ತಿಲ್ಲ. 1383 ಸಂಯೋಜಿತ ಕಾಲೇಜುಗಳಲ್ಲಿ ಸಾಕಷ್ಟು ಕ್ರೀಡಾ ವಿದ್ಯಾರ್ಥಿಗಳಿದ್ದರೂ ದೈಹಿಕ ನಿರ್ದೇಶಕರ (Physical director) ಕೊರತೆ ಇದೆ. ಆರೋಗ್ಯಕ್ಕೆ ಮಹತ್ವ ನೀಡುವ ನೆಲೆಯಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನ ವಿದ್ಯಾರ್ಥಿಗಳು ಕ್ರೀಡೆಗೆ ಹೆಚ್ಚಿನ ಮಹತ್ವ ನೀಡಬೇಕು.ಆರೋಗ್ಯ ವಿಜ್ಞಾನ ಕಾಲೇಜುಗಳ ಕ್ರೀಡಾ ಮೀಸಲಾತಿಯುಳ್ಳ ವಿದ್ಯಾರ್ಥಿಗಳ ಸಾಧನೆಯನ್ನು ಸಂಬಂಧಿಸಿದ ಇಲಾಖೆಗಳು ಅವಲೋಕಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ (Alwas Education Foundation) ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ(Kuvempu hall) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(Rajiv Gandhi University of Health Sciences) ಸಂಯೋಜಿತ ಕಾಲೇಜುಗಳ ಕರ್ತವ್ಯನಿರತ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಬೋಧಕರ ಸಂಘ ಉದ್ಘಾಟಿಸಿ ಮಾತನಾಡಿದರು.
ಇದನ್ನ ಓದಿ: ಮೂಡುಬಿದಿರೆಯಲ್ಲಿ ತುಳು ಮಹಾಕೂಟ -2023 ಆಯೋಜನೆ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯು ತನ್ನ ಸಿಂಡಿಕೇಟ್ ಸದಸ್ಯರಾಗಲು ದೈಹಿಕ ನಿರ್ದೇಶಕರಿಗೂ ಅವಕಾಶ ನೀಡುವುದರಿಂದ ಕ್ರೀಡಾ ವಿಭಾಗದ ಸಾಧಕ ಭಾದಕಗಳನ್ನು ಚರ್ಚಿಸಲು ಅವಕಾಶ ನೀಡಿದಂತಾಗುತ್ತದೆ. ಅಲ್ಲದೆ ಕ್ರೀಡಾ ಮೀಸಲಾತಿಯಿಂದ ವೈದ್ಯಕೀಯ ಸೀಟು ಪಡೆದ ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಪ್ರೋತ್ಸಾಹ ನೀಡಬೇಕು. ಈ ಮೂಲಕ ಸಂಘರ್ಷಕ್ಕೆ ದಾರಿ ಮಾಡದೆ ಸೌಹಾರ್ದತೆಯಿಂದ ಸಂಘಟನೆ ಮುಂದುವರಿಯಬೇಕು ಎಂದರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಸಿಂಡಿಕೇಟ್ ಸದಸ್ಯ ಡಾ. ಆನಂದ್ ಎಸ್. ಕಿರಿಶಾಲ್(Syndicate member Dr.Anand S Kirishal) ಮುಖ್ಯ ಅತಿಥಿಯಾಗಿದ್ದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಸಂಯೋಜಿತ ಕಾಲೇಜುಗಳ ಕರ್ತವ್ಯನಿರತ ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಬೋಧಕರುಗಳ ಸಂಘದ ಅಧ್ಯಕ್ಷ ಡಾ. ಜೋಸೆಫ್ ಅನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಡಾ. ಮಧು ಕಬಡ್ಡಿ ಕಾರ್ಯಾಗಾರ ನಡೆಸಿಕೊಟ್ಟರು.
ಡಾ. ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ದೈಹಿಕ ನಿರ್ದೇಶಕ ಜಯಕುಮಾರ್, ದಾವಣಗೆರೆಯ ಜೆಜೆಎಂ ಸಂಸ್ಥೆಯ ಗೋಪಾಲ ಕೃಷ್ಣ (Gopal Krishna of JJM Institute), ದಾವಣಗೆರೆಯ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ (Davangere College of Dental Science) ದೈಹಿಕ ನಿರ್ದೇಶಕ ಮಹೇಶ್, ಎಜೆ ಮೆಡಿಕಲ್ ಕಾಲೇಜಿನ ದೈಹಿಕ ನಿರ್ದೇಶಕ ಹರೀಶ್ ಗೌಡ, ಆಳ್ವಾಸ್ ಸಂಸ್ಥೆಯ ದೈಹಿಕ ನಿರ್ದೇಶಕ ಅವಿನಾಶ್ ಎಸ್ (Physical Director Avinash S) ಹಾಗೂ ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಂಡ್ಯ ಮೆಡಿಕಲ್ ಕಾಲೇಜಿನ ದೈಹಿಕ ನಿರ್ದೇಶಕ ಡಾ. ಸುರೇಶ್ ಸ್ವಾಗತಿಸಿದರು. ಶಿವಮೊಗ್ಗ ಮೆಡಿಕಲ್ ಕಾಲೇಜಿನ ದೈಹಿಕ ನಿರ್ದೇಶಕ ಡಾ. ರಮೇಶ್ ನಾಯಕ್ ವಂದಿಸಿದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ನಿರೂಪಿಸಿದರು.