ಮೂಡುಬಿದಿರೆ: ಸಿನಿಮಾ ಯಶಸ್ಸು ಕಾಣಲು ಪೂರ್ವ ತಯಾರಿ ಹಾಗೂ ನಿರ್ದೇಶಕರ ಸ್ಪಷ್ಟತೆ ಬಹುಮುಖ್ಯ. ಉತ್ತಮ ಸಿನಿಮಾ ಅಥವಾ ರಂಗ ಪ್ರಯೋಗಕ್ಕೆ ಪ್ರೇಕ್ಷಕರು ಬರುತ್ತಾರೆ. ಉತ್ತಮ ಪ್ರೇಕ್ಷಕ ವರ್ಗವನ್ನು ರೂಪಿಸುವುದೂ ಸಿನಿಮಾ-ರಂಗಕರ್ಮಿಗಳ ಜವಾಬ್ದಾರಿ. ಪ್ರೇಕ್ಷಕರೂ ಉತ್ತಮ ಪ್ರಯೋಗಗಳನ್ನು ಪ್ರೋತ್ಸಾಹಿಸಬೇಕು ಎಂದು ಸಿನಿಮಾ-ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ (Vijayakumar Kodiyalbail) ಹೇಳಿದರು.
ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ (Alwas Post Graduate Journalism and Mass Communication Department) ಸೋಮವಾರ ಆಳ್ವಾಸ್ ಫಿಲ್ಮ್ ಸೊಸೈಟಿ
ಕ್ಯಾಂಪ್ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ (Trustee Vivek Alva), ಸಿನಿಮಾ ಒಂದು ಉತ್ತಮ ಹಾಗೂ ಪ್ರಭಾವಿ ಸಮೂಹ ಮಾಧ್ಯಮ. ಆದರೆ, ಈ ಮಾಧ್ಯಮವನ್ನು ಉತ್ತಮ ಮೌಲ್ಯಗಳ ಸಂದೇಶ ನೀಡಲು ಬಳಸಬೇಕು. ಈಚೆಗೆ ಕೆಲವು ದ್ವೇಷ ಬಿತ್ತುವ ಸಿನಿಮಾಗಳು ಬಂದಿರುವುದು ಬೇಸರ ಮೂಡಿಸುತ್ತವೆ. ನಮ್ಮ ಯುವ ಜನತೆಗೆ ಉತ್ತಮ ಸಿನಿಮಾ ನೀಡುವ ಕೆಲಸ ಆಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಪ್ರಾಶುಂಪಾಲ ಡಾ.ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ , ಕಲಾವಿದ ರಾಜೇಶ್ ಕುಡ್ಲ, ಸೊಸೈಟಿ ವಿದ್ಯಾರ್ಥಿ ಸಂಯೋಜಕಿ ಸುಕನ್ಯಾ, ಇಎ ನಿತಿನ್, ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸ ಎಚ್., ಸಹಾಯಕ ಪ್ರಾಧ್ಯಾಪಕರಾದ ನಿಶಾನ್ ಕೋಟ್ಯಾನ್, ಇಂಚರ ಗೌಡ, ದುರ್ಗಾ ಪ್ರಸನ್ನ, ರವಿ ಮೂಡುಕೋಣಾಜೆ, ರವಿ ಶೆಣೈ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ ಪಿ.ಆರ್ A(ssistant Professor Harshvardhan P.R) ಪ್ರಾಸ್ತಾವಿಕವಾಗಿ ಮಾತನಾಡಿದರು. ಅವಿನಾಶ್ ಕಟೀಲ್ ಹಾಗೂ ಪ್ರಖ್ಯಾತ್ ಬೆಳುವಾಯಿ ನಿರೂಪಿಸಿದರು. ಕವನಾ ಸ್ವಾಗತಿಸಿದರು. ಶಿಲ್ಪಾ ವಂದಿಸಿದರು.
ಇದನ್ನ ಓದಿ: ಆಳ್ವಾಸ್ ಕಾಲೇಜಿನಲ್ಲಿ ‘ಚಿಣ್ಣರ ಮೇಳ- 2023’ ಉದ್ಘಾಟನೆ; ಮಕ್ಕಳಲ್ಲಿ ಮಡಿವಂತಿಕೆ ಬೇಡ: ಡಾ.ಆಳ್ವ
ಒಂದು ಸಂಪೂರ್ಣ ಹಾಸ್ಯಮಯ, ಇನ್ನೊಂದು ಭೂಗತ ಜಗತ್ತಿನ ಕತೆ ಹಾಗೂ ಮತ್ತೊಂದು ಕ್ರಿಕೆಟ್ ಆಟಗಾರನೊಬ್ಬನ ಕತೆಯ ನಾಟಕಗಳನ್ನು ನಿರ್ಮಿಸುತ್ತಿದ್ದೇನೆ. ಅದರ ಜೊತೆಗೆ ಶಿವಧೂತೆ ಗುಳಿಗೆ ನಾಟಕದ ಮೂಲಕ ಗಿನ್ನಿಸ್ ದಾಖಲೆ ಬರೆಯಲಿದ್ದೇವೆ. ಒರಿಯರ್ದೊರಿ ಅಸಲ್ ಭಾಗ-2′ ಸಿನಿಮಾ ಹಾಗೂ ಮೂರು ವಿಭಿನ್ನ ಅಸ್ತç (ನಾಟಕ)ಗಳನ್ನು ನಿರ್ಮಿಸುತ್ತೇವೆ.
– ವಿಜಯಕುಮಾರ್ ಕೊಡಿಯಾಲ್‌ಬೈಲ್