ಮೂಡುಬಿದಿರೆ: ಕೇವಲ ಕೌಶಲ ಇದ್ದರೆ ಸಾಲದು. ಅದರ ಅನುಷ್ಠಾನಕ್ಕೆ ಜ್ಞಾನವೂ ಮುಖ್ಯ ಎಂದ ಅವರು, ಕನ್ನಡ ಭಾಷೆಯು ದೇಸಿತನವನ್ನು ಹೊಂದಿದೆ. ಹಿರಿಯರು ಅಭಿವ್ಯಕ್ತಿಯ ಮೂಲಕವೇ ನಾಡನ್ನು ಕಟ್ಟಿದ್ದಾರೆ. ಸ್ವಾಭಿಮಾನ, ಸಾಮರಸ್ಯ ಸೇರಿದಂತೆ ಮಾನವೀಯ ಮೌಲ್ಯಗಳಿಂದ ಅಭಿವ್ಯಕ್ತಗೊಳಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ (Kannada Sahitya Academy)ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ(Venugopala shetty)ಹೇಳಿದರು.
ಆಳ್ವಾಸ್ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ(Alvas PG studies and Journalism department) ಅಭಿವ್ಯಕ್ತಿ 2023 ವೇದಿಕೆಯ ವಾರ್ಷಿಕ ಚಟುವಟಿಕೆಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿ(Prasad Shetty), ವಿದ್ಯಾರ್ಥಿಗಳ ಕೌಶಲಕ್ಕೆ ವಿಭಾಗದ ಅಭಿವ್ಯಕ್ತಿ ವೇದಿಕೆಯು ಅವಕಾಶ ಕಲ್ಪಿಸಿದೆ ಎಂದರು. ವೇದಿಕೆಯ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ನ್ಯಾಕ್ ಎ+ ಮಾನ್ಯತೆ
ಅಭಿವ್ಯಕ್ತಿ ವೇದಿಕೆಯ ಸಂಯೋಜಕಿ ದಿಶಾ ಗೌಡ, ಸಹ ಸಂಯೋಜಕ ವೈಶಾಖ್ ಮಿಜಾರು ಉಪಸ್ಥಿತರಿದ್ದರು. ಚಿದಾನಂದ ಸ್ವಾಗತಿಸಿದರು. ಅಕ್ಷಯ್ ಕುಮಾರ್ ವಿದ್ಯಾರ್ಥಿ ವೇದಿಕೆಯ ಕಾರ್ಯಕ್ರಮಗಳ ಮಾಹಿತಿ ನೀಡಿದರು. ಉಮರ್ ಫಾರುಕ್ ಅತಿಥಿಗಳನ್ನು ಪರಿಚಯಿಸಿದರು. ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಕುಲಾಲ್ ವಂದಿಸಿದರು.