ಮೂಡುಬಿದಿರೆ: ಮೂಡುಬಿದಿರೆ ವಾರ್ಡ್ ಸಂಖ್ಯೆ12 (Ward No.12) ನೇ ಹಳೆ ಪೊಲೀಸ್ ಠಾಣಿಯ ಬಳಿ ರೂ 9.50 ಲಕ್ಷ ಪುರಸಭಾ (Municipality) ನಿಧಿಯಿಂದ ಮಾಡಿರುವ ಅಭಿವೃದ್ದಿ ಕಾಮಧಾರಿಗಳಾದ ರಸ್ತೆ ಅಗಲೀಕರಣ (Road widening),ಚರಂಡಿ ವ್ಯವಸ್ಥೆ (Drainage system), ಹಾಗೂ ನೂತನ ಹೈ ಮಾಸ್ಟ್ ದೀಪದ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷರಾದ ಶ್ರೀ ಪ್ರಸಾದ್ ಕುಮಾರ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಸುಜಾತಾ ಶಶಿಕಿರಣ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾಗರಾಜ್ ಪೂಜಾರಿ, ಪುರಸಭಾ ಸದಸ್ಯರಾದ ಶ್ರೀಮತಿ ಸ್ವಾತಿ ಪ್ರಭು, ಶ್ರೀಮತಿ ಶ್ವೇತಾ ಪ್ರವೀಣ್ (Smt Shweta Praveen), ಶ್ರೀಮತಿ ಧನಲಕ್ಷ್ಮಿಮಾರೂರ್, ಎಂ ಸಿ ಎಸ್ ಬ್ಯಾಂಕಿನ ಅಧ್ಯಕ್ಷರಾದ ಬಾಹುಬಲಿ ಪ್ರಸಾದ್, ಶ್ರೀ ಮಹಾವೀರ ಪದವಿ ಪೂರ್ವ ಕಾಲೇಜಿನ (Sri Mahaveera Pre-Graduation College) ಪ್ರಾಂಶುಪಾಲರಾದ ರಮೇಶ್ ಭಟ್, ಪ್ರಮುಖರಾದ ದಯಾನಂದ ಪೈ, ಲಕ್ಷ್ಮಣ್ ಪೂಜಾರಿ, ರಾಜೇಶ್ ಮಲ್ಯ, ಸಾತ್ವಿಕ್ ಮಲ್ಯ, ರಾಹುಲ್ ಕುಲಾಲ್, ಅಭಿಷೇಕ್ ಕುಂದರ್, ಅಣ್ಣಪ್ಪ ಹಾಗೂ ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನ ಓದಿ: ಪುರಸಭೆ ಮತ್ತು ರೋಟರಿ ಕ್ಲಬ್ ನ ವಿನೂತನ ಕಾರ್ಯಕ್ರಮ; ವಿದ್ಯಾರ್ಥಿಗಳಿಗೆ ಜೀವನ ಕೌಶಲ್ಯ ತರಬೇತಿ