ಮೂಡುಬಿದಿರೆ: ಕೆಲಸವನ್ನು ತಿರಸ್ಕರಿಸಿ ತನ್ನ ಇಷ್ಟ ಕೃಷಿ ಕಾಯಕದಲ್ಲಿಯೇ ತೋಡಗಿಸಿಕೂಂಡ ಯುವ ಕೃಷಿ ಸಾಧಕ ಡಾ. ನಾಗರಾಜ ಶೆಟ್ಟಿ (Dr.Nagaraja shetty)ಯುವಕರಿಗೆ ಮಾದರಿ ಎಂದು ಪ್ರಗತಿಪರ ಕೃಷಿ, ಬೆದ್ರ ತುಳು ಕೂಟದ(Bedra Tulu koota) ಅಧ್ಯಕ್ಷ ಧನಕೀರ್ತಿ ಬಲಿಪ ಹೇಳಿದರು.
ಮೂಡಬಿದಿರೆಯ ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ಬೆಳುವಾಯಿ ಸವೀಪದ ಅಂಬೂರಿಯ ಡಾ. ನಾಗರಾಜ ಶೆಟ್ಟಿ ಅವರ ಕೃಷಿ ತೋಟ ವೀಕ್ಷಣೆ ಹಾಗೂ ಕೇಂದ್ರದ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕೇಂದ್ರದ ಸ್ಥಾಪಕಾಧ್ಯಕ್ಷ ಪಿ.ಕೆ. ರಾಜು ಪೂಜಾರಿ,ನಿಕಟ ಪೂರ್ವ ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಅಧ್ಯಕ್ಷ ಗುಣಪಾಲ ಮುದ್ಯ, ಕಾರ್ಯದರ್ಶಿ ಬಿ.ಅಭಯ ಕುಮಾರ್, ಕೋಶಾಧಿಕಾರಿ ಪಿ. ಜಯರಾಜ ಕಂಬಳಿ, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಎಸ್. ಡಿ. ಸಂಪತ್ ಸಾಮ್ರಾಜ್ಯ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಡಾ. ನಾಗರಾಜ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.
ಸಮಗ್ರ ಕೃಷಿಯ ಭಾಗವಾದ ಭತ್ತ, ಅಡಿಕೆ, ತೆಂಗು, ಅನಾನಾಸು,,ರಂಬುಟಾನ್, ಹೈನುಗಾರಿಕೆ, ಕೋಳಿ ಸಾಕಣೆ ಜೇನು ಸಾಕಣೆ, ಮೀನು ಸಾಕಣೆ, ಸಾವಯವ ಗೊಬ್ಬರ ತಯಾರಿಕೆ ಸಹಿತ ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿ , ಸಂವಾದ ಕಾರ್ಯಕ್ರಮವನ್ನು ನಡೆಸಲಾಯಿತು