ಮೂಡುಬಿದಿರೆ: ಶಿಕ್ಷಣವು ಕೇವಲ ಪರೀಕ್ಷಾ ಕೇಂದ್ರಿತವಾಗಿದ್ದು, ಅದು ಜ್ಞಾನಾಧರಿತ ಹಾಗೂ ಮೌಲ್ಯಾಧಾರಿತವಾಗಬೇಕಿದೆ ಎಂದು ಆಂಧ್ರಪ್ರದೇಶದ(Andhra Pradesh) ವಿಜ್ಞಾನ್ ವಿಶ್ವವಿದ್ಯಾನಿಲಯದ ಕುಲಪತಿ ಡಾ ಪಿ.ನಾಗಭೂಷಣ(Dr p nagabhushana) ಅವರು ಹೇಳಿದರು.
ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಶಂಕರ್ ಮಹಾದೇವನ್ ಸಂಗೀತ ರಸಸಂಜೆ
ಆಳ್ವಾಸ್(Alvas) ಇಂಜಿನಿಯರಿಂಗ್ ಕಾಲೇಜು(Engineering College) ಹಾಗೂ ಮೈಸೂರು ವಿಶ್ವವಿದ್ಯಾನಿಲಯದ(Mysore University) ಸಹಭಾಗಿತ್ವದಲ್ಲಿ ನಡೆದ `ಡೆಟಾ ಅನಾಲಿಟಿಕ್ಸ್ ಮತ್ತು ಲರ್ನಿಂಗ್’ (data analytics and learning) 2ನೇ ಅಂತರಾಷ್ಟ್ರೀಯ ವಿಚಾರಸಂಕಿರಣವನ್ನು ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನಸ್‌ನ ಡಾ.ಲಲಿತ್ ಮೋಹನ್ ಪಟ್ನಾಯಕ್, ಅಮೇರಿಕಾದ ಟೆಕ್ಸಾಸ್( technos institute of America) ವಿಶ್ವವಿದ್ಯಾನಿಲಯದ ಡಾ.ಎಚ್. ರಾಘವ್ ರಾವ್, ಮೈಸೂರು ವಿಶ್ವವಿದ್ಯಾನಿಲಯದ ಪ್ರೊ. ಗುರು ಅತಿಥಿಯಾಗಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ (vivekanava) ಅಧ್ಯಕ್ಷತೆವಹಿಸಿದರು. ಐಐಐಟಿ ಅಲಹಾಬಾದ್ ಸಹ ಪ್ರಾಧ್ಯಪಕ ಡಾ.ಮೊಹಮ್ಮದ್ ಜಾವೆದ್ ಹಾಗೂ ಡೆಟಾ ಸೈಂಟಿಸ್ಟ್ ವಿನಯ್ ಕುಮಾರ್ ಎನ್., ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಗೋವಾದಿಂದ 2, ಚಂಡೀಗಡ್‌ನಿಂದ 3, ಇರಾನ್‌ನಿಂದ 1 ಹಾಗೂ ಕರ್ನಾಟಕದ ವಿವಿಧ ವಿವಿಗಳಿಂದ 23 ಸಂಶೋಧಕರು ಪ್ರಬಂಧ ಮಂಡನೆ ಮಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ(Mangalore University) ಪ್ರೊ. ಶೇಖರ್, ಅಲಹಾಬಾದ್ ಐಟಟಿಯ ಡಾ. ಪವನ್ ಚಕ್ರವರ್ತಿ, ಹುಬ್ಬಳ್ಳಿ ಕೆಇಎಲ್ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಬಸವರಾಜ್ ಅನಮಿ ಎಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಂಪ್ಯೂಟರ್ ಸೈನ್ಸ್ (computer science) ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಕೊಟ್ಟಾರಿ ಸ್ವಾಗತಿಸಿದರು. ಉಪನ್ಯಾಸಕ ರಿಜ್ವಾನ್ ಶೇಖ್ ವಂದಿಸಿದರು. ಪ್ರಾಧ್ಯಾಪಕಿ ದೀಕ್ಷಾ ಎಂ. ಕಾರ್ಯಕ್ರಮ ನಿರೂಪಿಸಿದರು.