ಮೂಡುಬಿದಿರೆ: ಆಸಕ್ತರ ವೇದಿಕೆ ಆಶ್ರಯದಲ್ಲಿ ಮನೆಯಂಗಳದಲ್ಲೊಂದು ಸಾಹಿತ್ಯ ಸಂಜೆ ಕಾರ್ಯಕ್ರಮದ (Literally Evening Program at the House)ದ್ವಿತೀಯ ಅಭಿಯಾನದ ಅಂಗವಾಗಿ ದ್ವಿತೀಯ ಕಾರ್ಯಕ್ರಮ ಫೆಬ್ರವರಿ ತಿಂಗಳಲ್ಲಿ ನಡೆಯಲಿದ್ದು, ನ್ಯಾನೋ ಕಥಾ ಗೋಷ್ಠಿಯಾಗಿ (Nyano Katha Gosti) ಕಾರ್ಯಕ್ರಮ ಮೂಡಿಬರಲಿದೆ.
ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಉತ್ಸಾಹೀ ಯುವ ಹಾಗೂ ಪ್ರೌಢ ಕಥೆಗಾರರು ಈ ಗೋಷ್ಠಿಯಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತರು ಜನವರಿ 29ರೊಳಗಾಗಿ ಹೆಸರು ನೋಂದಾಯಿಸಲು ಕೋರಲಾಗಿದೆ. ಸದಭಿರುಚಿಯ ಸಾಹಿತ್ಯವನ್ನು ಪೋಷಿಸುವುದು ಹಾಗೂ ಆಸಕ್ತ ಯುವ ಸಾಹಿತಿಗಳಿಗೆ ಉತ್ತಮ ವೇದಿಕೆ ಒದಗಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕಾರ್ಯಕ್ರಮ ಸರಿಯಾದ ಸಮಯಕ್ಕೆ ಆರಂಭಗೊಂಡು ಸರಿಯಾದ ಸಮಯಕ್ಕೆ ಮುಕ್ತಾಯಗೊಳ್ಳಲಿದೆ. ಆಸಕ್ತರು ದೂರವಾಣಿ ಸಂಖ್ಯೆ 9483455922ಗೆ ಸಂಪರ್ಕಿಸುವಂತೆ ವೇದಿಕೆಯ ಸಂಚಾಲಕ ಹರೀಶ್ ಕೆ.ಆದೂರು(Harish K Adoor) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಜ.20 ಬಳಕೆದಾರ ಜಾಗೃತಿ ವೇದಿಕೆ ಪದಗ್ರಹಣ