ಮೂಡುಬಿದಿರೆ: ವೈದ್ಯಕೀಯ ತಂತ್ರಜ್ಞಾನ(Technology) ಕ್ಷೇತ್ರಗಳಿಗೆ ಅನಿವಾರ್ಯ ಹಾಗೂ ಅಗತ್ಯವಾಗಿರುವ ವಿಜ್ಞಾನದ (Science) ಬಗ್ಗೆ ವಿಶೇಷ ಸಂಶೋಧನೆ(Investigation) ಮಾಡುವ ಆಸಕ್ತಿ ವಿದ್ಯಾರ್ಥಿಗಳಿಗೆ(Students) ಬಾಲ್ಯದಲ್ಲಿ ಹುಟ್ಟಬೇಕಾದರೆ ಪ್ರಕೃತಿಯ(Environment) ಪ್ರತಿಯೊಂದು ಶಕ್ತಿಗಳನ್ನು ಆಸಕ್ತಿಯಿಂದ ಶ್ರದ್ಧೆಯಿಂದ ಪ್ರಶ್ನಿಸುವ ಗುಣಗಳನ್ನು ಬೆಳೆಸಿಕೊಂಡು ಆ ಕುರಿತಾಗಿ ಸಂಶೋಧನೆ ದೃಷ್ಟಿಯಿಂದ ಮುಂದುವರಿಯಬೇಕೆಂದು ಇಸ್ರೋ ವಿಜ್ಞಾನಿ(ISRO scientist) ಚೈತನ್ಯ ಡಿ. ಜೈನ್(Chaitanya D Jain) ಹೇಳಿದರು.
ಮೂಡುಬಿದಿರೆ ಕಲ್ಲಬೆಟ್ಟುವಿನಲ್ಲಿರುವ(Kalla bettu)ಎಕ್ಸಲೆಂಟ್ ಸಮೂಹ ಸಂಸ್ಥೆಯಲ್ಲಿ(excellent educational institution) ನಡೆದ ಸ್ಪಿರಿಟ್ ಆಫ್ ಇನ್ನೋವೇಶನ್(spirit of innovation) ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನು ಓದಿ: ಮೂಡುಬಿದಿರೆ ವಕೀಲರ ಭವನ ಲೋಕಾರ್ಪಣೆ ಹಿರಿಯ ಸಿವಿಲ್ ನ್ಯಾಯಾಧೀಶರು-ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆ
ಎಕ್ಸಲೆಂಟ್ ಸಮೂಹ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್(yuvaraj Jain)ಅಧ್ಯಕ್ಷತೆ ವಹಿಸಿದರು. ವಿದ್ಯಾರ್ಥಿಗಳ ದೃಷ್ಟಿ ವೈಜ್ಞಾನಿಕವಾಗಿ ಬಲಗೊಂಡು ಅವರ ಸೃಜನಶೀಲತೆಗೆ ಇಂತಹ ಕಾರ್ಯಕ್ರಮಗಳು ಬಲ ತುಂಬಿ ವ್ಯಕ್ತಿತ್ವದಲ್ಲಿ ಬಲಿಷ್ಠರಾಗುವಲ್ಲಿ ಸಹಕಾರಿಯಾಗಲಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ ಭಟ್, ಉಪ ಪ್ರಾಂಶುಪಾಲ ಮನೋಜ್ ಕುಮಾರ್, ಉಜಿರೆಯ ಡಾ.ಸಂಪತ್ ಕುಮಾರ್(Dr Sampath Kumar) ಉಪಸ್ಥಿತರಿದ್ದರು. ಆ ಬಳಿಕ ವಿದ್ಯಾರ್ಥಿಗಳ ಜೊತೆ ವಿಜ್ಞಾನ ಮತ್ತು ಸಂಶೋಧನೆ ಕುರಿತು ಸಂವಾದ ನಡೆಯಿತು. ಉಪನ್ಯಾಸಕ ವಿಕ್ರಂ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.