ಮೂಡುಬಿದಿರೆ : ರಾಷ್ಟ್ರಮಟ್ಟದ ಜೆಇಇ ಪ್ರವೇಶ ಪರೀಕ್ಷೆಯಲ್ಲಿ ಮೂಡುಬಿದಿರೆಯ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ (Excellent College of Science and Commerce) ವಿದ್ಯಾರ್ಥಿಗಳು ಉತ್ತಮ ಅ0ಕಗಳನ್ನು ಪಡೆದು ಸಾಧನೆಗೈದಿದ್ದಾರೆ. ಪರೀಕ್ಷೆ ಬರೆದ 132 ವಿದ್ಯಾರ್ಥಿಗಳಲ್ಲಿ 130 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ (JEE Advance) ಗೆ ಅರ್ಹತೆ ಪಡೆದಿರುತ್ತಾರೆ. ಇವರಲ್ಲಿ 48 ವಿದ್ಯಾರ್ಥಿಗಳು 90 ಪರ್ಸೆಂಟ್ ಗಿಂತ ಅಧಿಕ ಅಂಕವನ್ನು (Morethan 90 percent) ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಚಿನ್ಮಯಿ ಬೋರ್ಕರ್ (Chinmayi Borkar) (99.4065729), ವೈಶಾಕ್ ಎ0. (99.2549636), ಬಾಲಚ0ದ್ರಗೌಡ ಕಲ್ಲಪ್ಪಗೌಡ (98.9098579), ಸಮರ್ಥ್ ಕೆ.ಎನ್ (98.775088), ಕಾರ್ತಿಕೇಯ(97.5664883), ಅನಂತ ಕೃಷ್ಣ ದೇಸಾಯಿ (97.56874132), ರಂಗಸ್ವಾಮಿ ಜಿ.ಕೆ (97.4659408), ಆಯುಶ್ ಗೌಡ (97.2172102), ಜೀವನ್ ಆಶಿತ್ ಪಿರೇರಾ (97.2172136), ಆದಿತ್ಯ ರವೀಂದ್ರ (97.0098926), ಸ್ವಜನ್ ಆರ್.ಶೆಟ್ಟಿ (96.9989223), ವ0ಶಿ ಮಾಧವ್ (96.9800119), ಸಾತ್ವಿಕ್ ಪೈ (96.4180825), ಈಶಾನ್ ಜೈನ್ ವಿ (96.3178763), ಬಿ ಪಿ ಮೋನಲ್(96.0178935), ರಜತ್ ಆರ್ (96.5436338), ವರುಣ್ ಟಿ ಎಸ್ (96.124465), ವೆಂಕಟೇಶ ಕೆ.ವೈ (95.10) ಅಂಕಗಳನ್ನು ಪಡೆದಿದ್ದಾರೆ.
ಇದನ್ನ ಓದಿ: ಆಳ್ವಾಸ್ ಕಾಲೇಜಿನಲ್ಲಿ ಸಿಎ ಫೌಂಡೇಶನ್ ವಿದ್ಯಾರ್ಥಿಗಳಿಗೆ ಅಭಿನಂದನೆ
ವಿದ್ಯಾರ್ಥಿಗಳ ಸಾಧನೆಗೆ ಸ0ಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಜೆಇಇ ಸಂಯೋಜಕರಾದ ರಾಮಮೂರ್ತಿ (JEE Coordinator Ramamurthy) ಹಾಗೂ ಉಪನ್ಯಾಸ ವೃ0ದದವರು ವಿದ್ಯಾರ್ಥಿಗಳನ್ನು ಅಭಿನ0ದಿಸಿದ್ದಾರೆ.