ಪೆರ್ಮುದೆ: ಕೆಲ ದಿನಗಳ ಹಿಂದೆ ನಾಯಿಯನ್ನು ಚಿರತೆಗಳು (leopard)ಅಟ್ಟಿಸಿ ಬಂದದ್ದು ಸಿ. ಸಿ. ಟಿವಿ(CCTV)ಯಲ್ಲಿ ದಾಖಲಾಗಿತ್ತು. ಈಗ ಹಾಡು ಹಗಲೇ ಹಸುವಿನ ಕರುವನ್ನು ಹಿಡಿಯುವ ಪ್ರಯತ್ನವನ್ನು ಮಾಡಿದೆ.
ಮಂಗಗಳು ಸದ್ದು ಮಾಡಿ ಕರುವನ್ನ ಸುತ್ತುವರಿದಿದ್ದು ನಾಯಿಗಳು ಕೂಡ ಬೊಗಳುವ ಸದ್ದಿಗೆ ರೈತ ಪಾಸ್ಕಲ್ ಅವರು ಮನೆಯಿಂದ ಓಡಿ ಬಂದಿರುವ ಕಾರಣ ಚಿರತೆ ಅಲ್ಲಿಂದ ಓಡಿದೆ. ಈವರೆಗೆ ಕೇವಲ ನಾಯಿಗಳನ್ನು ಮಾತ್ರ ಕೊಂಡೊಯ್ಯುವ ಚಿರತೆಗಳು ದನಕರುಗಳ ಮೇಲೂ ದಾಳಿ ನಡೆಸಲು ಆರಂಭಿಸಿವೆ.
ಪೆರ್ಮುದೆ, ತೆಂಕ ಎಕ್ಕಾರು(Permude,Thenka ekkar)ಗ್ರಾಮಗಳು ಗುಡ್ಡ ಕಾಡು, ಕೃಷಿ ತೋಟ ಪ್ರದೇಶವಾಗಿದ್ದು ಜನರು ನಡೆದಾಡಲು ಹೆದರುವ ಪರಿಸ್ಥಿತಿ ಎದುರಾಗಿದೆ. ಮಕ್ಕಳು ಶಾಲೆಗೆ ನಡೆದು ಕೊಂಡು ಹೋಗುತ್ತಿದ್ದು ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಹೆಚ್ಚಿನ ಹಾನಿಯಾಗುವ ಮುಂಚೆ ಅರಣ್ಯ ಇಲಾಖೆ ಅಧಿಕಾರಿಗಳು (Forest Department)ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.