ಮೂಡುಬಿದಿರೆ: ಮನಸ್ಸು ಆರೋಗ್ಯವಾಗಿದ್ದರೆ ಮಾತ್ರ ನಮ್ಮೆಲ್ಲ ಕನಸುಗಳನ್ನು ನನಸು ಮಾಡಲು ಸಾಧ್ಯ. ದೇಹವು ಸಪ್ತಧಾತುಗಳಿಂದ ಕೂಡಿದೆ. ಆದರೆ, ಅವುಗಳ ಎಲ್ಲದರ ನಿಯಂತ್ರಣ ಮನಸ್ಸಿನಲ್ಲಿದೆ. ಅದನ್ನು ಸಮಾಜದ ಹಿತಕ್ಕಾಗಿ ಬಳಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ (Dr. M Mohan Alva is the Chairman of Alva’s Education Foundation) ಹೇಳಿದರು.
ಆಳ್ವಾಸ್ ಕಾಲೇಜು ಆವರಣದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಮ್ಮಿಕೊಂಡ ಮೂಲ ಸಮಾಲೋಚನಾ ಕೌಶಲ ಕುರಿತ ಎರಡು ದಿನಗಳ ರಾಷ್ಟç ಮಟ್ಟದ ಸಮ್ಮೇಳನ ಮನಸ್ವಿ 2023 ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (Srikshetra Dharmasthala Village Development Scheme)b(ಎಸ್‌ಕೆಡಿಆರ್‌ಡಿಪಿ) ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಮಾತನಾಡಿ, ಗ್ರಾಮೀಣ ಭಾಗದಲ್ಲಿರುವ ಮಾನಸಿಕ ಅಸ್ವಸ್ಥರಿಗೆ ಉತ್ತಮ ಚಿಕಿತ್ಸೆ ನೀಡಲು ಆಳ್ವಾಸ್ ಆಯುರ್ವೇದ ಆಸ್ಪತ್ರೆ ಜೊತೆ ಸೇರಿ ಕೆಲಸ ಮಾಡಲಾಗುವುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಪ್ತ ಸಮಾಲೋಚಕಿ ದಿಶಾರಾಗ್ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ. ಉಪಸ್ಥಿತರಿದ್ದರು.
ಇದನ್ನ ಓದಿ: ಸಿಎಸ್‌ಇಇಟಿ ಪರೀಕ್ಷೆಯಲ್ಲಿ ಆಳ್ವಾಸ್ ಪ.ಪೂ ವಿದ್ಯಾರ್ಥಿಗಳ ಸಾಧನೆ
ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ. ಸ್ಮಿತಾ ಸ್ವಾಗತಿಸಿದರು. ಡಾ. ರವಿಪ್ರಸಾದ್ ಹೆಗ್ಡೆ ಮತ್ತು ಡಾ.ನಿಖಿಲ್, ಡಾ. ಗೀತಾ ಮಾರ್ಕೆಂಡೆ ಕಾರ್ಯಕ್ರಮ ಸಂಯೋಜಿಸಿದರು, ಡಾ ವಿನಿತಾ ಡಿಸೋಜಾ ವಂದಿಸಿದರು.
ಸಮಾರೋಪ:
ಉಡುಪಿಯ ಎಸ್‌ಡಿಎಂ ಆಯುರ್ವೇದ ಕಾಲೇಜು (SDM Ayurvedic College, Udupi), ಬೆಳ್ತಂಗಡಿಯ ಪ್ರಸನ್ನ ಆಯುರ್ವೇದ ಕಾಲೇಜು, ಆಳ್ವಾಸ್ ಸಂಯೋಜಿತ ವಿಜ್ಞಾನ ವಿಭಾಗ, ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ, ಆಳ್ವಾಸ್ ಪ್ರಕೃತಿ ಚಿಕಿತ್ಸೆ ಹಾಗೂ ಯೋಗವಿಜ್ಞಾನ ಕಾಲೇಜು (Alwas College of Naturopathy and Yoga Science), ಶಿವಮೊಗ್ಗದ ರೋಟರಿ ಕಾಲೇಜು, ಆಳ್ವಾಸ್ ಆಯುರ್ವೇದ ಸ್ನಾತಕೋತ್ತರ ವಿಭಾಗ ಸೇರಿದಂತೆ ವಿವಿಧ ಸಂಸ್ಥೆಗಳನ್ನು ಪ್ರತಿನಿಧಿಸಿದ ಒಟ್ಟು 98 ಮಂದಿಗೆ ಮಂಗಳವಾರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ನೀಡಲಾಯಿತು.