ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ (Mangalore University) 2021-22ನೇ ಶೈಕ್ಷಣಿಕ ವರ್ಷದ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಒಟ್ಟು 22 ರ‍್ಯಾಂಕ್‌ಗಳನ್ನು (22 Rank) ಪಡೆದ ಮೂಡುಬಿದಿರೆಯ ಆಳ್ವಾಸ್ ಕಾಲೇಜು (Alwas College) ಅತೀ ಹೆಚ್ಚು ರ‍್ಯಾಂಕ್ ಗಳಿಸಿದ ಕಾಲೇಜು ಹೆಗ್ಗಳಿಕೆಗೆ ಪಾತ್ರವಾಗಿದೆ. ವಿ.ವಿ. ಮಟ್ಟದಲ್ಲಿ ಕಳೆದ 12 ವರ್ಷಗಳಿಂದ ಸರಾಸರಿ 20ಕ್ಕಿಂತಲೂ ಅಧಿಕ ರ‍್ಯಾಂಕ್‌ಗಳನ್ನು ಪಡೆಯುತ್ತಿರುವ ಆಳ್ವಾಸ್ ಕಾಲೇಜು ಮತ್ತೊಮ್ಮೆ ಅಗ್ರಸ್ಥಾನ (The Top) ಅಲಂಕರಿಸಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ (Dr. M Mohan Alva Chairman of Alva’s Education Foundation) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸ್ನಾತಕೋತ್ತರ ವಿಭಾಗದಲ್ಲಿ 6 ಪ್ರಥಮ ರ‍್ಯಾಂಕ್, ಪದವಿಯಲ್ಲಿ 4 ಪ್ರಥಮ ರ‍್ಯಾಂಕ್, 5 ದ್ವಿತೀಯ, 4 ತೃತೀಯ, ತಲಾ ಒಂದೊಂದು ಐದು ಮತ್ತು ಏಳನೇ ರ‍್ಯಾಂಕ್ ಹಾಗೂ ಬಿ.ಇಡಿ ಐದನೇ ರ‍್ಯಾಂಕ್ ಬಂದಿವೆ.
ಪದವಿ ವಿಭಾಗ : ಬಿಎ(ಎಚ್‌ಆರ್‌ಡಿ) ವಿಭಾಗದಲ್ಲಿ ಹುಸ್ನಾ ಫರಾತ್ (ಶೇ79.91) ಪ್ರಥಮ ರ‍್ಯಾಂಕ್, ಬಿಎಸ್‌ಡಬ್ಲೂö್ಯ ವಿಭಾಗದಲ್ಲಿ ಗೀತಾಂಜಲಿ ಹರಿಯಾಲ್ (ಶೇ86.83) ಪ್ರಥಮ ರ‍್ಯಾಂಕ್, ಬಿಎಸ್ಸಿ (ಎಫ್‌ಎನ್‌ಡಿ) ವಿಭಾಗದಲ್ಲಿ ಪ್ರಿಯಂವಧಾ (ಶೇ 91.94) ಪ್ರಥಮ ರ‍್ಯಾಂಕ್, ಬಿವಿಎ ವಿಭಾಗದಲ್ಲಿ ಪ್ರದೀಶ್ ಕೆ. (ಶೇ84.11) ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಬಿಸಿಎ ವಿಭಾಗದಲ್ಲಿ ಸ್ಯಾಮ್ಸನ್ ಮ್ಯಾಥ್ಯೂ (ಶೇ 97.06) ದ್ವಿತೀಯ ರ‍್ಯಾಂಕ್, ಬಿಎಸ್‌ಡಬ್ಲೂ ವಿಭಾಗದಲ್ಲಿ ನವ್ಯಶ್ರೀ (ಶೇ 83.97) ದ್ವಿತೀಯ ರ‍್ಯಾಂಕ್, ಬಿಎಸ್ಸಿ (ಎಫ್‌ಎನ್‌ಡಿ) ವಿಭಾಗದಲ್ಲಿ ದೀಕ್ಷಾ ಆರ್. ನಾಯಕ್( ಶೇ90.06) ದ್ವಿತೀಯ ರ‍್ಯಾಂಕ್, ಬಿವಿಎ ವಿಭಾಗದಲ್ಲಿ ಪವನ್‌ಕುಮಾರ್ (ಶೇ 83.83) ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.
ಬಿ.ಕಾಂ ವಿಭಾಗದಲ್ಲಿ ವೀಕ್ಷಾ ಎಚ್. ಶೆಟ್ಟಿ (95.17) ತೃತೀಯ ರ‍್ಯಾಂಕ್, ಬಿಎಸ್ಸಿ (ಎಫ್‌ಎನ್‌ಡಿ) ವಿಭಾಗದಲ್ಲಿ ಡವೀನ ಪಿಂಟೊ (ಶೇ 89.91) ತೃತೀಯ ರ‍್ಯಾಂಕ್, ಬಿವಿಎ ವಿಭಾಗದಲ್ಲಿ ಪ್ಲಾಬಿನ್ ಪಿ.ಬಿ. (ಶೇ 83.33) ತೃತೀಯ ರ‍್ಯಾಂಕ್, ಬಿ.ಎ. ವಿಭಾಗದಲ್ಲಿ ಶ್ರೇಯಾ ಜಿ.ಎಚ್. (88.85) ಐದನೇ ರ‍್ಯಾಂಕ್, ಬಿಪಿಇಡಿಯಲ್ಲಿ ಹರ್ಷಿತಾ ರಾವ್ ಐದನೇ ರ‍್ಯಾಂಕ್ ಹಾಗೂ ಬಿಎಯ ಜೋಸ್ವಿನ್ ಡಿಸೋಜ (ಶೇ87.47) ಏಳನೇ ರ‍್ಯಾಂಕ್ ಪಡೆದಿದ್ದಾರೆ.
ಸ್ನಾತಕೋತ್ತರ ವಿಭಾಗ: ಎಂಎ ಜೆಎಂಸಿ ವಿಭಾಗದದಲ್ಲಿ ದುರ್ಗಾಪ್ರಸನ್ನ, ಎಂ.ಕಾA. (ಇನ್ಶೂರೆನ್ಸ್ ಆಂಡ್ ಬ್ಯಾಂಕ್ ಮ್ಯಾನೇಜ್‌ಮೆಂಟ್) ಮೇಘಾ ಆರ್., ಮನಃಶಾಸ್ತçದಲ್ಲಿ ನೌಶಿದ್ ಕರುಂಬೈಲ್, ಎಂಎಸ್ಸಿ ಅನಾಲಿಟಿಕಲ್ ಕೆಮೆಸ್ಟಿç ವಿಭಾಗದ ಆಶಾ ಜೈನ್ ಹಾಗೂ ಎಂಎಸ್ಸಿ ಕೆಮೆಸ್ಟಿç ವಿಭಾಗದ ಲತಾ ಜೋಗಿ ಹಾಗೂ ಎಂಪಿಇಡಿ ವಿಭಾಗದ ಶ್ರೀಜಾ.ಪಿ.ಎಸ್ ಪ್ರಥಮ ಸ್ಥಾನ ಪಡೆದಿದ್ದಾರೆ.
11 ವಿದ್ಯಾರ್ಥಿಗಳಿಗೆ ಪದಕ: ಸಾಧಕ ವಿದ್ಯಾರ್ಥಿಗಳಿಗೆ ನೀಡಲಾಗುವ 11 ದತ್ತಿ ಪದಕ-ಪ್ರಶಸ್ತಿಯು ಆಳ್ವಾಸ್ ಕಾಲೇಜಿಗೆ ಬಂದಿದ್ದು, ಎಂಎ-ಜೆಎAಸಿಯ ದುರ್ಗಾಪ್ರಸನ್ನ ಮತ್ತು ಎಂಎಸ್ಸಿ ಕೆಮೆಸ್ಟಿç ವಿಭಾಗದ ಲತಾ ಜೋಗಿ ತಲಾ 4 ಪದಕ-ಬಹುಮಾನ ಪಡೆದಿದ್ದಾರೆ.
ಎಂಎ ಜೆಎಂಸಿಯ ದುರ್ಗಾಪ್ರಸನ್ನ ಡಾ.ಟಿಎಂಎ ಪೈ ಚಿನ್ನದ ಪದಕ, ರಾಮಕೃಷ್ಣ ಮಲ್ಯ ಚಿನ್ನದ ಪದಕ, ದಕ್ಷಿಣ ಕನ್ನಡ ಮಕ್ಕಳ ಚಲನಚಿತ್ರ ಪ್ರಶಸ್ತಿಯ ಪದಕ ಹಾಗೂ ಎಂಸಿಜೆ ಸಿಲ್ವರ್ ಜ್ಯುಬಲಿ ನಗದು ಪ್ರಶಸ್ತಿ ಪಡೆದಿದ್ದಾರೆ.
ಎಂಎಸ್ಸಿ ಕೆಮೆಸ್ಟಿç ವಿಭಾಗದ ಲತಾ ಜೋಗಿ ಅವರಿಗೆ ಪ್ರೊ.ಬಿ.ತಿಮ್ಮೇಗೌಡ ಚಿನ್ನದ ಪದಕ, ಡಾ.ಎಂ. ಅಬ್ದುಲ್ ಖಾದರ್ ಚಿನ್ನದ ಪದಕ, ಪ್ರೊ.ಎಂ.ಆರ್. ಗಜೇಂದ್ರಗಢ ನಗದು ಪುರಸ್ಕಾರ ಪ್ರಶಸ್ತಿ ಹಾಗೂ ಪ್ರೊ.ಬಿ. ಶಿವರಾಮ ಹೊಳ್ಳ ಚಿನ್ನದ ಪದಕ ಪಡೆದಿದ್ದಾರೆ.
ಎಂಪಿಇಡಿ ವಿಭಾಗದ ಶ್ರೀಜಾ ಪಿ.ಎಸ್. ಅವರಿಗೆ ಅಶ್ವಿನಿ ಶೆಟ್ಟಿ ಆಂಡ್ ಗೌತಮ್ ಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕ, ಎಂಎಸ್ಸಿ ಫಿಸಿಕ್ಸ್ ವಿಭಾಗದ ರಾಕೆಂದು ಎಸ್.ಆರ್. ರವರಿಗೆ ಕಂಡೆನ್ಸ್÷್ಡ ಮ್ಯಾಟರ್ ಫಿಸಿಕ್ಸ್ಗೆ ನೀಡುವ ನೋಬೆಲ್ ಪುರಸ್ಕೃತ ಸರ್ ಸಿ.ವಿ.ರಾಮನ್ ಪ್ರೆöಸ್ ಡಾ.ಎಸ್.ಎನ್. ಬೋಸ್ ಪ್ರಶಸ್ತಿ, ಡಾ. ಹೋಮಿ ಭಾಭಾ ಪ್ರಶಸ್ತಿ , ಎಂಎಸ್ಸಿ ಮನಶಾಸ್ತç ವಿಭಾಗದ ನೌಶಿದ್ ಕರುಂಬಿಲ್ ಅವರಿಗೆ ಪೂಜ್ಯ ಕೀರ್ತಿಶೇಷ ಧರ್ಮಸ್ಥಳ ಮಂಜಯ್ಯ ಹೆಗ್ಗಡೆ (Dharamsthala Manjaiah Heggade) ಜನ್ಮಶತಮಾನೋತ್ಸವ ಸಂಸ್ಮರಣಾ ಚಿನ್ನದ ಪದಕ ಲಭಿಸಿದೆ.
ಮೂಡಬಿದಿರೆ: ಆಳ್ವಾಸ್ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಡೆಂಗ್ಯೂಗೆ ಬಲಿ
ಪ್ರಾಂಶುಪಾಲ ಡಾ. ಕುರಿಯನ್ (Principal Dr. Kurian) ಆಳ್ವಾಸ್ ದೈಹಿಕ ಶಿಕ್ಷಣ (Alwas Physical Education) ಕಾಲೇಜಿನ ಪ್ರಾಂಶುಪಾಲ ಮಧು ಜಿ.ಆರ್ ಸುದ್ದಿಗೋಷ್ಠಿಯಲ್ಲಿದ್ದರು.