ಮೂಡುಬಿದಿರೆ: ಋಣತ್ರಯದ ಜೊತೆಗೆ ಸಮಾಜದ ಋಣವೂ ದೊಡ್ಡದು. ಸಮಾಜದ ಋಣಸಂದಾಯದ ಮೂಲಕ ಮುಂದಿನ ಪೀಳಿಗೆಗೆ ಸತ್ ಸಂಪ್ರದಾಯದ ಪಥವನ್ನು ತೋರಿಕೊಡಬೇಕು. ಆ ನಿಟ್ಟಿನಲ್ಲಿ ಎಕ್ಸಲೆಂಟ್ ಸಂಸ್ಥೆ ತೋರಿಕೊಟ್ಟ ದಾರಿ ಅನುಸರಣೀಯವಾದದು. ನಮ್ಮ ತೊಡಗಿಸಿಕೊಳ್ಳುವಿಕೆ ನಾಳಿನ ಬದುಕಿನ ಇರುಳಿನ ತಿರುವಿಗೆ ದೀಪವಿಡುವಂತಾಗಬೇಕು ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ಪ್ರೊ.ಸಂಪತ್ ಕುಮಾರ್ ಹೇಳಿದರು.
ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಎಕ್ಸಲೆಂಟ್ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆವಹಿಸಿ ಮಾತನಾಡಿ, ಪರಿವರ್ತನಾ ಶೀಲವಾದ ಪ್ರಪಂಚದಲ್ಲಿ ಬದುಕು ಪ್ರವೃತ್ಯತ್ಮಾಕ ನೈಜ ಪ್ರವಾಹ ಚೇತನ ಅದರ ಕೇಂದ್ರ. ಚೇತನಕ್ಕೆ ಸ್ಫೂರ್ತಿ ಕೊಟ್ಟ ಸರ್ವರನ್ನೂ ಗುರುತಿಸಿ ಗೌರವಿಸುವುದರ ಮೂಲಕ ಸಮಾಜ ಕಟ್ಟಿದವರ ಗೌರವಿಸಿದ ತೃಪ್ತಿ ನಮಗಿದೆ ಎಂದರು.
ದಶಮ ಸಂಭ್ರಮದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ರಾಹುಲ್ ಕುಲಾಲ್, ರಾಮಚಂದ್ರ, ಅಮರ್ ಕೋಟೆ, ಶ್ರೀಪತಿಭಟ್ ಮೂಡುಬಿದಿರೆ, ಸಿ.ಹೆಚ್ ಗಪೂರ್, ವಸಂತ್ ಶೆಟ್ಟಿ, ಉಮೇಶ್ ಪೈ ಭಗಿನಿ ಪ್ರೆಸಿಲ್ಲ , ಈಶ್ವರಭಟ್, ಬಾಹುಬಲಿ ಪ್ರಸಾದ್, ರತ್ನಾಕರ ಭಟ್, ರಾಮದಾಸ ಆಸ್ರಣ , ಮನೋಜ್ ಕುಮಾರ್, ಪತ್ರಕರ್ತ ಪ್ರಸನ್ನ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಎಕ್ಸಲೆಂಟ್ ವಿದ್ಯಾರ್ಥಿ ಧ್ರುವಂತ್ ಬರೆದಿರುವ ಕಿರು ಕಾದಂಬರಿ ಆಕ್ಟ್ರಿಲ್ 137′ ನ್ನು ಬಿಡುಗಡೆಗೊಳಿಸಲಾಯಿತು. ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಉಪ ಪ್ರಾಂಶುಪಾಲ ಮನೋಜ್, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥ ರಂಜಿತ್ ಜೈನ್ ಉಪಸ್ಥಿತರಿದ್ದರು.
ಉಪನ್ಯಾಸಕಿ ರಶ್ಮಿ ಜೈನ್ ಸ್ವಾಗತಿಸಿದರು. ಯಶಸ್ವಿನಿ ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ವಿಕ್ರಂ ನಾಯಕ್ ಸನ್ಮಾನಿತರ ವಿವರ ನೀಡಿದರು.