News Karnataka
Wednesday, June 07 2023
ಕ್ಯಾಂಪಸ್

ಅನಾರೋಗ್ಯ ಪೀಡಿತರ ಚಿಕಿತ್ಸೆಗೆ ನೇತಾಜಿ ಬ್ರಿಗೇಡ್ ನಿಂದ ಸಹಾಯಧನ ವಿತರಣೆ

The "Netaji Brigade", an NGO in Moodbidri, which has collected funds for the treatment of sick children by dressing up in various places including Koti-Chennayya Jodukare Kambala, handed over a total of Rs 2,02,576 to the eight helpless people on Sunday.
Photo Credit : News Karnataka

ಮೂಡುಬಿದಿರೆ: ಇಲ್ಲಿನ ಕೋಟಿ-ಚೆನ್ನಯ (Koti-Chennayya) ಜೋಡುಕರೆ ಕಂಬಳ(Jodukare Kambala) ಸಹಿತ ಹಲವು ಕಡೆ ವೇಷ ಧರಿಸಿ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗಾಗಿ ಧನವನ್ನು ಸಂಗ್ರಹಿಸಿರುವ ಮೂಡುಬಿದಿರೆಯ ಸ್ವಯಂ ಸೇವಾ ಸಂಸ್ಥೆ (Self-serve Organisation)”ನೇತಾಜಿ ಬ್ರಿಗೇಡ್” (Nethaji Brigade)ಅಸಹಾಯಕರಾಗಿರುವ 8 ಜನರಿಗೆ ಒಟ್ಟು ರೂ 2,02,576 ನ್ನು ಭಾನುವಾರ (Sunday)ಹಸ್ತಾಂತರಿಸಿದರು.

ಕಾರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಉಮಾನಾಥ ಎ.ಕೋಟ್ಯಾನ್ ಜ್ಯೋತಿನಗರ ಶಾಲೆಯಲ್ಲಿ ಸಹಾಯಧನವನ್ನು ಹಸ್ತಾಂತರಿಸಿ ಮಾತನಾಡಿ, ಜಾತ್ರೆ, ಕಂಬಳ ಸಹಿತ ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವೀಕ್ಷಣೆ ಮಾಡುವ ಬದಲು ವಿಶೇಷ ರೀತಿಯ ವೇಷಭೂಷಣಗಳನ್ನು ಧರಿಸಿ ಡಬ್ಬಗಳನ್ನು ಹಿಡಿದು ದಾನಿಗಳಿಂದ ಸಹಕಾರ ಪಡೆದು ಅದನ್ನು ವಿವಿಧ ರೀತಿಯ ಅನಾರೋಗ್ಯ ಪೀಡಿತ ಅಶಕ್ತ ಕುಟುಂಬಗಳಿಗೆ ನೀಡಿ ವೈದ್ಯಕೀಯ ಚಿಕಿತ್ಸೆಗೆ ಸ್ಪಂದಿಸಿ ಕಣ್ಣೀರನ್ನು ಒರೆಸಿ ಶಕ್ತಿ ತುಂಬುವಂತಹ ಕೆಲಸವನ್ನು “ನೇತಾಜಿ ಬ್ರಿಗೇಡ್” ಮಾಡುತ್ತಿರುವುದು ಶ್ಲಾಘನೀಯ.

ನೇತಾಜಿ ಬ್ರಿಗೇಡ್ ನ ರಾಹುಲ್‌ಕುಲಾಲ್ ಮಾತನಾಡಿ, ಆಶಕ್ತರ ಚಿಕಿತ್ಸೆಗಾಗಿ ಈವರೆಗೆ ನಾವು 49 ಕುಟುಂಬಗಳಿಗೆ ರೂ 13,08303 ವನ್ನು ಹಸ್ತಾಂತರಿಸಿದ್ದೇವೆ. ಇತ್ತೀಚೆಗೆ ಮೂಡುಬಿದಿರೆಯಲ್ಲಿ ನಡೆದ 20ನೇ ವರ್ಷದ  ಕೋಟಿ-ಚೆನ್ನಯ ಜೋಡುಕರೆ ಕಂಬಳದಲ್ಲಿ ನಮ್ಮ 9ನೇ ಸೇವಾ ಯೋಜನೆಗಾಗಿ ರೂ 2,2,576ನ್ನು ಸಂಗ್ರಹಿಸಿ 8 ಜನರ ಚಿಕಿತ್ಸೆಗೆ ನೀಡಿದ್ದೇವೆ. ಮುಂದಿನ ದಿನಗಳಲ್ಲಿ ಒಂದು ಅಂಬ್ಯುಲೆನ್ಸ್ (Ambulance) ನ್ನು ಖರೀದಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ ಎಂದರು.

ಧನ ಸಂಗ್ರಹಕ್ಕಾಗಿ ವೇಷ ಹಾಕಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕ್ಯಾನ್ಸರ್ ಸಹಿತ ವಿವಿಧ ರೋಗಗಳ ಚಿಕಿತ್ಸೆಗಾಗಿ ಈ ಸಹಾಯಧನವನ್ನು ನೀಡಲಾಗಿದೆ. ಪುರಸಭಾ ಅಧ್ಯಕ್ಷ ಪ್ರಸಾದ್ ಕುಮಾರ್, ಗುರುಸ್ವಾಮಿ ರಾಘು ಪೂಜಾರಿ, ಸಂತೋಷ್ ಶೆಟ್ಟಿ, ಪುರಸಭಾ ನಾಮ ನರ‍್ದೇಶಿತ ಸದಸ್ಯ ರಾಜೇಶ್ ಮಲ್ಯ‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನೇತಾಜಿ ಬ್ರಿಗೇಡ್ ನ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

News Karnataka

Read More Articles
MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *