ಮೂಡುಬಿದಿರೆ: ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಮೂಡುಬಿದಿರೆ ನ್ಯಾಯಾಲಯದ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡ ವಕೀಲರ ಭವನದ ಉದ್ಘಾಟನೆ ನಾಳೆ ಮೂಡುಬಿದಿರೆ ನ್ಯಾಯಾಲಯದ ಆವರಣದಲ್ಲಿ ನೆರವೇರಲಿದೆ ಎಂದು ಮೂಡುಬಿದಿರೆ ವಕೀಲರ ಸಂಘದ ಅಧ್ಯಕ್ಷ ಎಂ.ಕೆ ದಿವಿಜೇಂದ್ರ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿಎಸ್. ಅಬ್ದುಲ್ ನಝೀರ್, ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಮೂರ್ತಿ ಗೌರವಾನ್ವಿತ ಪ್ರಸನ್ನ ಬಿ. ವರಾಳೆ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ನ್ಯಾಯಾಂಗ, ದಕ್ಷಿಣ ಕನ್ನಡ, ಲೋಕೋಪಯೋಗಿ ಇಲಾಖೆ ದಕ್ಷಿಣ ಕನ್ನಡ ಮತ್ತು ಮೂಡುಬಿದಿರೆ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನೂತನ ವಕೀಲರ ಭವನದ ಉದ್ಘಾಟನೆ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಾಮೂರ್ತಿಗಳಾದ ಗೌರವಾನ್ವಿತ ಎಸ್. ಜಿ. ಪಂಡಿತ್, ಎಸ್ ವಿಶ್ವಜಿತ್ ಶೆಟ್ಟಿ, ಸಿ. ಎಂ ಜೋಶಿ, ಟಿ.ಜಿ ಶಿವಶಂಕರೇ ಗೌಡ ಮತ್ತು ಇಂಧನ ಸಚಿವ ಸುನೀಲ್ ಕುಮಾರ್ ಭಾಗವಹಿಸಲಿರುವರು.
ಸಂಸದರಾದ ನಳೀನ್ ಕುಮಾರ್ ಕಟೀಲ್, ಶಾಸಕರಾದ ಉಮಾನಾಥ ಎ ಕೋಟ್ಯಾನ್, ಕರ್ನಾಟಕ ಹೈ ಕೋರ್ಟ್ನ ಮಹಾವಿಲೇಖಣ ಅಧಿಕಾರಿ ಮುರಳೀದಾರ ಪೈ. ಡಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷ ಪಿ.ಪಿ ಹೆಗ್ಡೆ, ಮೂಡುಬಿದಿರೆ ವಕೀಲರ ಸಂಘದ ಸ್ಥಾಪಕ ಅಧ್ಯಕ್ಷ ಎಂ ಬಾಹುಬಲಿ ಪ್ರಸಾದ್ ಸಮಾರಂಭದಲ್ಲಿ ಉಪಸ್ಥಿತಲಿರುವರು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಪ್ರವೀಣ್ ಎಸ್.ಲೋಬೊ, ಉಪಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ, ಕೋಶಾಧಿಕಾರಿ ಕಿಶೋರ್, ಪದಾಧಿಕಾರಿಗಳಾದ ಆನಂದ ಕೆ.ಶಾಂತಿನಗರ, ಶಶಿಕಲಾ, ಮೇಘರಾಣಿ ಉಪಸ್ಥಿತರರಿದ್ದರು.
ಮೂಡಬಿದಿರೆಯಲ್ಲಿ ಈ ಹಿಂದೆ ವಾರದ ಎರಡು ದಿನಗಳಲ್ಲಿ ಮಾತ್ರ ಕಲಾಪ ನಡೆಸುತ್ತಿದ್ದ 3ನೇ ಹೆಚ್ಚುವರಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮಂಗಳೂರು ಇದರ ಸಂಚಾರಿ ಪೀಠವನ್ನು ಮೂಡುಬಿದಿರೆಗೆ ಸ್ಥಳಾಂತರಿಸಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಎಂದು ಮರು ಪದನಾಮಕರಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ. ಈ ಮೂಲಕ ಮೂಡುಬಿದಿರೆಗೆ ಹೆಚ್ಚವರಿಯಾಗಿ ನ್ಯಾಯಾಲಯ ಮಂಜೂರಾಗಿದೆ. ಇದರ ಉದ್ಘಾಟನೆ ಕೂಡ ವಕೀಲರ ಭವನದ ಜೊತೆ ನಡೆಯುವ ಸಾಧ್ಯತೆಗಳಿವೆ.