ಮೂಡುಬಿದಿರೆ: ಕೆಚ್ಚೆದೆಯಿಂದ ಹೋರಾಟ ಮಾಡಿ ಭಾರತೀಯರಿಗೆ ಪ್ರೇರಣೆಯಾಗಿದ್ದ ಸುಭಾಷ್ ಚಂದ್ರಬೋಸ್ (Subhash Chandra Bose)ಭಾರತಕ್ಕಾಗಿ ಸ್ವಾಮಿ ವಿವೇಕಾನಂದರ(Swami Vivekananda) ಬದುಕಿನಿಂದ ಸ್ಫೂರ್ತಿ ಪಡೆದಿದ್ದರು. ದೈಹಿಕ ಬಲಕ್ಕೆ ಮನೋದಾರ್ಢ್ಯದ ಬದುಕು ಅತ್ಯವಶ್ಯ. ತನ್ಮೂಲಕ ಸ್ವತಂತ್ರ ಭಾರತ ನಿರ್ಮಾಣದ ಕನಸನ್ನು ಕಂಡವರು ನೇತಾಜಿ(Netaji) ಎಂದು ಮಂಗಳೂರಿನ ವಕೀಲ ಎಸ್.ಪಿ ಚೆಂಗಪ್ಪ (S P Changappa)ಹೇಳಿದರು.
ಭಾರತ ಸರ್ಕಾರದ ಕ್ರೀಡಾ ಮತ್ತು ಯುವಜನ ಇಲಾಖೆ, ನೆಹರು ಯುವ ಕೇಂದ್ರ ಮಂಗಳೂರು, ನೇತಾಜಿ ಯುವ ಬ್ರಿಗೇಡ್ ಮೂಡುಬಿದಿರೆ ಮತ್ತು ಎಕ್ಸಲೆಂಟ್ ವಿದ್ಯಾ ಸಂಸ್ಥೆಯ (excellent institutions)ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ನೇತಾಜಿ ಸುಭಾಷ್‌ಚಂದ್ರ ಬೋಸರ ಜನ್ಮ ದಿನಾಚರಣೆಯ ಅಂಗವಾಗಿ ISRO: ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗೆ ಇಸ್ರೋ ವಿಜ್ಞಾನಿ ಭೇಟಿಪರಾಕ್ರಮ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅಧ್ಯಕ್ಷತೆವಹಿಸಿದರು. ನೇತಾಜಿ ಯುವ ಬ್ರಿಗೇಡ್‌ನ ಸಂಚಾಲಕ ರಾಹುಲ್ ಕುಲಾಲ್, ಆಂಗ್ಲ ಶಾಲೆಯಮುಖ್ಯ ಶಿಕ್ಷಕ ಶಿವಪ್ರಸಾದ ಭಟ್ ಉಪಸ್ಥಿತರಿದ್ದರು.
ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ತೇಜಸ್ವಿ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ರೋಚನಾ ಮಲ್ಯ ಸುಭಾಷ್ ಚ0ದ್ರ ಬೋಸರ ಬಗ್ಗೆ ಮಾತನಾಡಿದರು. ಡಾ. ವಾದಿರಾಜ ಕಲ್ಲೂರಾಯ ನಿರೂಪಿಸಿದರು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.