ಮೂಡುಬಿದಿರೆ: ಆಳ್ವಾಸ್ ಪಿಯು ಕಾಲೇಜಿನ (Alvas PU college) ವಿದ್ಯಾರ್ಥಿನಿ ಪ್ರಚೀತಾ ಎಂ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿನ ರಾಜ್ಯಕ್ಕೆ ತೃತೀಯ (Third to the state) ಸ್ಥಾನಿಯಾಗಿದ್ದಾಳೆ.
ಗಣಿತ, ಜೀವಶಾಸ್ತ್ರ, ಸಂಸ್ಕೃತದಲ್ಲಿ ತಲಾ 100, ಬೌತಶಾಸ್ತ್ರದಲ್ಲಿ 99, ರಸಾಯನಶಾಸ್ತ್ರದಲ್ಲಿ 98 (98 in Chemistry), ಹಾಗೂ ಇಂಗ್ಲೀಷ್‌ನಲ್ಲಿ 97, ಅಂಕಗಳನ್ನು ಪಡೆದಿದ್ದಾಳೆ. ಈಕೆ ಮೂಲತಃ ಮಂಡ್ಯದವಳಾಗಿದ್ದು ಮಂಡ್ಯದ ಸರ್ಕಾರಿ ಕಾಲೇಜಿನ ಗಣಿತ ಉಪನ್ಯಾಸಕ ಮಲ್ಲೇಶ್ ಎಂ.ಎ, ಗಣಿತ ಶಿಕ್ಷಕಿ ಜ್ಯೋತಿ ಎಸ್.ಆರ್ (Mathematics teacher Jyoti S.R) ಅವರ ಪುತ್ರಿ.
ಇದನ್ನ ಓದಿ: ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ಪ್ರಾಯೋಗಿಕ ತರಬೇತಿ ಕಾರ್ಯಾಗಾರ
ಕಾಲೇಜಿನ ಪಾಠಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದೆ. ಪಠ್ಯದ ಓದಿನ ಜೊತೆಗೆ ಆಳ್ವಾಸ್‌ನಲ್ಲಿ ನೀಡುವ ಸ್ಟಡಿ ಮೆಟೀರಿಯಲ್‌ಗಳು (Study Materials) ಓದಿಗೆ ಪೂರಕವಾಗಿತ್ತು, ಆಳ್ವಾಸ್ ಸ್ಟಡಿ ಮೆಟೀರಿಯಲ್‌ಗಳ ಓದಿನಿಂದ ಹೆಚ್ಚು ಅಂಕಗಳಿಸುವಂತಾಗಿದೆ. ನೀಟ್, ಸಿಇಟಿಗೆ (NEET, CET) ಮುಂದೆ ತಯಾರಿ ನಡೆಸುತ್ತೇನೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.