ಮೂಡುಬಿದಿರೆ: ಇಲ್ಲಿನ ಕಲ್ಲಬೆಟ್ಟುವಿನಲ್ಲಿರುವ (Kallabett) ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ (Excellent institution) ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ ಪ್ರಾಯೋಗಿಕ ತರಬೇತಿ ಕುರಿತು ಒಂದು ದಿನದ ಕಾರ್ಯಗಾರವನ್ನು ಆಯೋಜಿಸಲಾಯಿತು.
ಮೂಡಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ವೈ (Field Education Officer Ganesh Y) ಮಾತನಾಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ವೈಜ್ಞಾನಿಕ ಬೆಳವಣಿಗೆಗೆ ಅಟಲ್ ಟಿಂಕರಿಂಗ್ (Atal Tinkering) ಲ್ಯಾಬ್ ಸಹಕಾರಿಯಾಗಿದೆ ಎಂದರು. ಅಟಲ್ ಟಿಂಕರಿಂಗ್ ಲ್ಯಾಬ್ ನೋಡಲ್ ಅಧಿಕಾರಿ (Atal Tinkering Lab Nodal Officer), ಡಯಟ್ ಉಪನ್ಯಾಸಕಿ ವೇದಾವತಿ ಬಿ.ಕೆ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕಾರ್ಯಗಾರ ಜ್ಞಾನವನ್ನು ಮೂಡಿಸಲಿದೆ ಎಂದರು.
ಇದನ್ನ ಓದಿ: ಮೂಡುಬಿದಿರೆ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ನಾಮಪತ್ರ ಸಲ್ಲಿಕೆ
ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆವಹಿಸಿದರು. ಅಟಲ್ ಟಿಂಕರಿಂಗ್ ಲ್ಯಾಬ್ ವಿದ್ಯಾರ್ಥಿಗಳಲ್ಲಿ ಹಲವಾರು ಸೃಜನಾತ್ಮಕ ಚಿಂತನೆಗಳು ಹಾಗೂ ಆವಿಷ್ಕಾರಗಳ ಬೆಳವಣಿಗೆ ಹೆಚ್ಚಾಗುತ್ತದೆ ಎಂದರು. ಸ್ಮಿತಾ ಮಿರಾಂದ, ಸಿಆರ್‌ಪಿ ಮಹೇಶ್ವರಿ (CRP Maheshwari) ಮತ್ತು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿದ್ದರು.
ಮಾಸ್ಟರ್ ಸುನೀಲ್ ಕುಮಾರ್ ಎಚ್.ಪಿ ಕಾರ್ಯಾಗಾರ ನಡೆಸಿಕೊಟ್ಟರು. ಶಿಕ್ಷಕ ವಿನಯಚಂದ್ರ ಜೈನ್ (Teacher Vinayachandra Jain) ಸ್ವಾಗತಿಸಿದರು. ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ವಂದಿಸಿದರು. ಶಿಕ್ಷಕ ನಿರಂಜನ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ವಿಜ್ಞಾನ ಶಿಕ್ಷಕರು, ಅಟಲ್ ಟಿಂಕರರಿಂಗ್ ಲ್ಯಾಬ್ ಉಸ್ತುವಾರಿಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ 33 ಶಿಕ್ಷಕರು ಭಾಗವಹಿಸಿದ್ದರು.